Breaking News

ವಿಪ್ರೋ ಮಾಲಕರ ಶೇರು ಮಾರಾಟವಿಲ್ಲ, ದುರುದ್ದೇಶದ ಸುದ್ದಿ ಬೇಡವೆಂದ ಅಜೀಂ ಪ್ರೇಮ್‌ಜಿ

ವಿಪ್ರೊ ಅಥವಾ ಅದರ ಕೆಲ ಘಟಕಗಳನ್ನು ಮಾರಾಟ ಮಾಡಲು ಸಂಸ್ಥೆಯ ಪ್ರವರ್ತಕರು ಆಲೋಚಿಸುತ್ತಿದ್ದಾರೆ ಎನ್ನುವ ವರದಿಗಳನ್ನು ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ಜೀ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ದೇಶದ ಮೂರನೇ ಅತಿದೊಡ್ಡ ಐಟಿ ಸಂಸ್ಥೆಯ ಪ್ರವರ್ತಕರು ಸಂಸ್ಥೆಯಲ್ಲಿನ ತಮ್ಮ ಪಾಲು ಬಂಡವಾಳ ಮಾರಾಟ ಮಾಡಲು ಸಂಪತ್ತಿನ ಮೌಲ್ಯಮಾಪನ ಮಾಡುತ್ತಿದ್ದಾರೆ ಎನ್ನುವ ಪತ್ರಿಕಾ?ವರದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಪತ್ರಿಕಾ ವರದಿಗಳು ಆಧಾರರಹಿತ ಮತ್ತು ದುರುದ್ದೇಶದಿಂದ ಕೂಡಿವೆ ಎಂದು ಅವರು ಸಂಸ್ಥೆಯ ಸಿಬ್ಬಂದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಂತರ ಜಾಲ ಸುದ್ದಿ ತಾಣವೊಂದು ಬ್ಯಾಂಕಿಂಗ್ ಮೂಲಗಳನ್ನು ಉದ್ಧರಿಸಿ ಈ?ವರದಿ ಪ್ರಕಟಿಸಿತ್ತು. ಸಂಸ್ಥೆಯು ಈ ಸಂಬಂಧ ಹೂಡಿಕೆ ಬ್ಯಾಂಕನ್ನು ಸಂಪರ್ಕಿಸಿದೆ ಎಂದೂ ವರದಿ ಮಾಡಿತ್ತು. ೫೦ ವರ್ಷಗಳಲ್ಲಿ ಸಂಸ್ಥೆಯು ಪ್ರಾದೇಶಿಕ ಖಾದ್ಯ ತೈಲ ತಯಾರಿಕೆಯಿಂದ ಜಾಗತಿಕ ಐಟಿ ಸಂಸ್ಥೆಯಾಗಿ ಬೃಹದಾಕಾರವಾಗಿ ಬೆಳೆದಿರುವುದನ್ನು ನಾನು ನೋಡಿದ್ದೇನೆ. ಐಟಿ ಉದ್ದಿಮೆ ಮತ್ತು ವಿಪ್ರೊ ಸಂಸ್ಥೆಯ ಬೆಳವಣಿಗೆಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಸಂಸ್ಥೆಗೆ ನಾನು ಬದ್ಧನಾಗಿರುವೆ ಎಂದು ಪ್ರೇಮ್ಜೀ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Related posts

Leave a Reply