Header Ads
Breaking News

ವಿಮಾನ ನಿಲ್ದಾಣದ ಹೆಸರಿನಲ್ಲಿ ಕಾಂಗ್ರೆಸ್‌ನಿಂದ ಜಾತಿ ರಾಜಕೀಯ-ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಆರೋಪ

ಮಂಗಳೂರು ವಿಮಾನ ನಿಲ್ದಾಣದ ಹೆಸರಿನಲ್ಲಿ ಕಾಂಗ್ರೆಸ್ ಇವತ್ತು ಜಾತಿ ರಾಜಕೀಯವನ್ನು ಮಾಡುತ್ತಿದೆ. ಅನೇಕ ವರ್ಷಗಳಿಂದ ಜಾತಿಯ ವಿಷಬೀಜವನ್ನು ಜಿಲ್ಲೆಯಲ್ಲಿ ಮತ್ತು ದೇಶದಲ್ಲಿ ಬಿತ್ತುವ ಮುಖಾಂತರ ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಾ ಇವತ್ತು ಕಾಂಗ್ರೆಸ್ ನೆಲಕಚ್ಚುವಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜಕೀಯ ವಿಷಬೀಜವನ್ನು ಬಿತ್ತಿ, ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಆರೋಪಿಸಿದರು.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಇವತ್ತು ಖಾಸಗೀಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. 2012ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆಯಾದಾಗ ಯುಪಿಎ ಸರ್ಕಾರ ಇತ್ತು. ಅಗಲೇ ಕೋಟಿಚೆನ್ನಯ್ಯರ ಹೆಸರನ್ನು ಇಡಬೇಕೆನ್ನುವ ಚಿಂತನೆ ಯಾಕೆ ಬಂದಿಲ್ಲ. ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನು ಇಡಬೇಕೆನ್ನು ಗೊಂದಲ ಕಾಂಗ್ರೆಸ್ ಮುಖಂಡರಲ್ಲಿಯೇ ಇದೆ. ಒಟ್ಟು ಜಿಲ್ಲೆಯಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತುವ ಮುಖಾಂತರ ಅರಾಜಕತೆಯನ್ನು ಸೃಷ್ಠಿ ಮಾಡುವ ದುಸ್ಸಾಹಸಕ್ಕೆ ಇವತ್ತು ಕಾಂಗ್ರೆಸ್ ಇಳಿದಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ರಣ್‌ದೀಪ್ ಕಾಂಚನ್, ಈಶ್ವರ್ ಕಟೀಲ್, ರಾಧಾಕೃಷ್ಣ, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *