Header Ads
Header Ads
Header Ads
Breaking News

ವಿರೋಧದ ನಡುವೆ ವೈನ್‌ಶಾಪ್ ಆರಂಭ ಕೋಟಾದ ಚಿತ್ರಪಾಡಿಯಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

 

ಕೋಟಾದ ಚಿತ್ರಪಾಡಿ ಮಾರಿಯಮ್ಮ ದೇವಸ್ಥಾನ ಮುಂಭಾಗ ಆರಂಭಗೊಂಡ ವೈನ್ಸ್‌ಶಾಪ್ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಇಲ್ಲಿ ವೈನ್‌ಶಾಪ್ ಆರಂಭಗೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಈ ಹಿಂದೆಯೂ ಪ್ರತಿಭಟನೆ ನಡೆಸಿದ್ದರು. ಆದರೂ ಮತ್ತೆ ಇದು ಆರಂಭವಾದ ಕುರಿತು ಪ್ರತಿಭಟನೆ ವ್ಯಕ್ತವಾಯಿತು.
ಅನಂತರ ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ಕುಮಾರಸ್ವಾಮಿ, ಅಬಕಾರಿ ಇಲಾಖೆ ಡಿ.ಸಿ. ಮೇರುನಂದನ್ ಅವರು ತಮ್ಮ ಸಿಬಂದಿಗಳೊಂದಿಗೆ ಆಗಮಿಸಿದರು.
ಈ ಸಂದರ್ಭ ಈ ಮದ್ಯದಂಗಡಿ ಪರ ಪ.ಪಂ. ಸಾಮಾನ್ಯಸಭೆಯಲ್ಲಿನಿರ್ಣಯ ಕೈಗೊಂಡು ಕುರಿತು ಚರ್ಚೆ ನಡೆಯಿತು ಹಾಗೂ ಸಾಮಾನ್ಯಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸದಸ್ಯರು ತಿಳಿಸಿದರು ಹಾಗೂ ಮುಖ್ಯಾಧಿಕಾರಿಗಳೇ ಸದಸ್ಯರ ಅನುಮತಿ ಇಲ್ಲದೆ ನಿರ್ಣಯ ಕೈಗೊಂಡಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದರು.
ಈ ಸಂದರ್ಭ ಸದಸ್ಯರಾದ ರಾಜು ಪೂಜಾರಿ, ಅಚ್ಯುತ್ ಪೂಜಾರಿ, ಶ್ರೀನಿವಾಸ್ ಅಮೀನ್, ಕರುಣಾಕರ, ಸ್ಥಳೀಯ ಪಾಂಚಜನ್ಯ ಸಂಘದ ಸದಸ್ಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಉಪಸ್ಥಿತರಿದ್ದರು.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply