Header Ads
Breaking News

ವಿವಾದದ ಕಿಡಿ ಹೊತ್ತಿಸಿದ ಸಂಸದ ನಳಿನ್ ಟ್ವೀಟ್: ಟೀಕೆಗಳು ವ್ಯಕ್ತವಾಗ್ತಾ ಇದ್ದಂತೆ ಟ್ವೀಟ್ ಡಿಲಿಟ್!

 ದ.ಕ. ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಅವರು ಸಾಧ್ವಿ ಪ್ರಜ್ಞಾಸಿಂಗ್ ಅವರ ಹೇಳಿಕೆಯನ್ನು ಸಮರ್ಥಿಸುವ ಭರದಲ್ಲಿ ಟ್ವೀಟೊಂದನ್ನು ಮಾಡಿ, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ರು. ಇನ್ನು ಈ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ತಾ ಇದ್ದಂತೆ ಟ್ವೀಟ್‍ನ್ನು ಡಿಲಿಟ್ ಮಾಡಿ ಕ್ಷಮೆಕೋರಿದ್ದಾರೆ.

ಬೆಳಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆ ಚೌಕಿದಾರ್ ನಳಿನ್ ಕುಮಾರ್ ಕಟೀಲು ಖಾತೆಯಿಂದ ಟ್ವೀಟ್ ಮಾಡಿದ ನಳಿನ್ ಕುಮಾರ್ ಕಟೀಲು ಅವರು, ನಾತೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000, ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ಟ್ವೀಟ್ ಮಾಡಿದ್ದರು. ಇನ್ನು ಟ್ವೀಟ್ ಬಗ್ಗೆ ವಿವಾದಗಳು ಹುಟ್ಟಿಕೊಳ್ತಾ ಇದ್ದಂತೆ ವಿವಾದಾತ್ಮಕ ಟ್ವೀಟ್‍ನ್ನು ಸಂಸದ ನಳೀನ್‍ಕುಮಾರ್ ಡಿಲಿಟ್ ಮಾಡಿದ್ದರು. ಬಳಿಕ ಕ್ಷಮೆಯಾಚಿಸಿದ್ದಾರೆ. ನನ್ನ ಕೊನೆಯ ಎರಡು ಟ್ವೀಟ್‍ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಚರ್ಚೆ ಇಲ್ಲಿಗೆ ಮುಗಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *