Header Ads
Header Ads
Breaking News

ವಿವಾದ ಎಬ್ಬಿಸಿದ ಪ್ರಮೋದ್ ಮಧ್ವರಾಜ್ ಹೇಳಿಕೆ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟಿಪ್ಪು ಜಯಂತಿ ಬಗ್ಗೆ ಆಡಿರುವ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಅಲೆ ಎಬ್ಬಿಸಿದೆ. ಉಡುಪಿ ಜಿಲ್ಲೆಯ ಪೇತ್ರಿ ಸೈಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವದಲ್ಲಿ ಮಾತನಾಡುವ ವೇಳೆ ‘ಚರ್ಚ್ ನಾಶ ಮಾಡಿದ ಟಿಪ್ಪುವಿನ ಜಯಂತಿಯಲ್ಲಿ ನಾನು ಭಾಗವಹಿಸದಂತೆ ದೇವರೇ ಮಾಡಿದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಈ ಹೇಳಿಕೆ ಮುಸ್ಲೀಂ ಗ್ರೂಪ್ ಗಳಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಪೇತ್ರಿ ಚರ್ಚ್ ನ್ನು ಟಿಪ್ಪುವಿನ ಸೈನ್ಯ ಸಂಪೂರ್ಣ ನಾಶಮಾಡಿತ್ತು ಅನ್ನೋದು ಇಲ್ಲಿನ ಇತಿಹಾಸ. ನಮ್ಮ ಸರ್ಕಾರ ಇದ್ದಾಗ ಸರಿಯೋ ತಪ್ಪೋ ಗೊತ್ತಿಲ್ಲ ಟಿಪ್ಪು ಜಯಂತಿ ಆಚರಣೆ ಮಾಡಿತ್ತು. ಆ ಸಂದರ್ಭದಲ್ಲಿ ನನಗೆ ಯಾವುದೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಈ ಚರ್ಚ್‌ಅನ್ನು ಟಿಪ್ಪು ನಾಶ ಮಾಡಿದ ಕಾರಣಕ್ಕೆ ದೇವರು ನನಗೆ ಅಲ್ಲಿ ಹೋಗದ ಹಾಗೆ ಮಾಡಿದ್ದಾರೆ ಎಂದು ಪ್ರಮೋದ್ ಹೇಳಿದ್ದಾರೆ. ಕಾಂಗ್ರೇಸ್ ಸರ್ಕಾರ ಆಡಳಿತ ಇದ್ದಾಗ ನಡೆದ ಮೂರು ಟಿಪ್ಪು ಜಯಂತಿಯಲ್ಲೂ ಪ್ರಮೋದ್ ಭಾಗವಹಿಸಿರಲಿಲ್ಲ. ಅವರ ಸಾಫ್ಟ್ ಹಿಂದುತ್ವ ಕೆಲವರ ಆಕ್ಷೇಪಕ್ಕೂ ಕಾರಣವಾಗಿತ್ತು.

Related posts

Leave a Reply