Header Ads
Breaking News

ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ : ಹೆಜಮಾಡಿ ಸಮೀಪ ಘಟನೆ

ವಿವಾಹಿತ ವ್ಯಕ್ತಿಯೋರ್ವ ಅತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯ ಹೆಜಮಾಡಿ ಸಮೀಪ ನಡೆದಿದೆ. ಹೆಜಮಾಡಿ ಸಮೀಪದ ನಿವಾಸಿ ದಿನೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಮನೆಯ ಹಿಂಬದಿಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರ ಪತ್ನಿ ಮಂಗಳೂರಿನಲ್ಲಿ ವೃತ್ತಿಯಲ್ಲಿದ್ದು, ಅವರು ಅಲ್ಲೇ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಆದರೆ ಕೆಲವು ದಿನಗಳಿಂದ ದಿನೇಶ್ ಹೆಜಮಾಡಿಯಲ್ಲಿ ಒಂಟಿಯಾಗಿಯೇ ಇದ್ದರು ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯ ಮಿತ್ರ ಇಂದು ಬೆಳಗ್ಗೆ ಹೆಜಮಾಡಿ ಮನೆಗೆ ಆಗಮಿಸಿದ್ದು, ಕರೆ ಮಾಡಿದರೂ ಸ್ವೀಕರಿಸಿದ ಕಾರಣ ಮನೆಯ ಹಿಂಬದಿ ಹೋಗಿ ಕಿಟಕಿಯಲ್ಲಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *