Breaking News

ವಿವಿಧ ಇಲಾಖೆಗಳ ನಾಲ್ಕು ವರುಷದ ಜನಪರ ಕೆಲಸ, ಜನತೆಗೆ ವರದಿ ಕೊಡಲು ಮಂತ್ರಿ ಮಧ್ವರಾಜ್ ಆದೇಶ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಇಲಾಖೆ ಮತ್ತು ಯೋಜನೆಗಳಡಿ ಮಾಡಲಾದ ಕಾಮಗಾರಿಗಳ ಬಗ್ಗೆ ಜನತೆಗೆ ವರದಿ ಒಪ್ಪಿಸಬೇಕು. ಇನ್ನಷ್ಟು ಕಾಮಗಾರಿಗಳು ನಡೆಯಬೇಕಿದ್ದರೆ ಜನರಿಂದಲೇ ನೇರವಾಗಿ ತಿಳಿದುಕೊಂಡು ಅದನ್ನು ಮಾಡಿಸಿಕೊಡಬೇಕೆಂಬ ಜನಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕರಂಬಳ್ಳಿ ನೇಕಾರರ ಕಾಲನಿಯ ಅಂಗನವಾಡಿ ಬಳಿ ಬಯಲು ರಂಗ ಮಂಟಪದಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ಕರಂಬಳ್ಳಿ ವಾರ್ಡ್ ಮಟ್ಟದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ೧,೭೬೯ ಕೋ. ರೂ. ಅಭಿವೃದ್ಧಿ ಕೆಲಸಗಳ ಪರಾಮರ್ಶೆಗಾಗಿ ಗ್ರಾಮದೆಡೆ ವಿಶ್ವಾಸದ ನಡೆ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಜನರ ಕಷ್ಟ ಮತ್ತು ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಜನರಿಂದ ಬಂದ ಬೇಡಿಕೆಗಳಿಗೆ ಸ್ಪಂದಿಸಿ ಸರಕಾರದಿಂದ ಅನುದಾನ ಬಂದಾಗ ಹಂತ ಹಂತವಾಗಿ ವಿವಿಧ ಕಾಮಗಾರಿಗಳನ್ನು ಮಾಡಿಸಿ ಕೊಡಲಾಗುವುದು. ೮೦೦ ರೂ. ಮಿತಿಯೊಳಗಿನ ವಿದ್ಯುತ್ ಬಿಲ್ ಪಾವತಿಸುವವರು ಬಿಪಿ‌ಎಲ್ ಕಾರ್ಡ್ ಪಡೆದು ಸರಕಾರದಿಂದ ಸಿಗುವ ಹಲವು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭ ಸಚಿವರು ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತುಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂಗ ವಿಕಲವೇತನ, ಪ್ರೋತ್ಸಾಹಧನ ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕರಂಬಳ್ಳಿ ವಾರ್ಡ್ ಸದಸ್ಯೆ ಸೆಲಿನಾ ಕರ್ಕಡ, ನಗರಸಭೆ ಸದಸ್ಯರಾದ ಸತೀಶ್ ಪುತ್ರನ್, ಆರ್. ಕೆ. ರಮೇಶ್, ರಮೇಶ್ ಕಾಂಚನ್, ಜನಾರ್ದನ್ ಭಂಡಾರ್ಕರ್, ಗಣೇಶ್ನೇರ್ಗಿ, ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್, ಬ್ರಹ್ಮಾವರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply