Header Ads
Breaking News

ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿಯ ವತಿಯಿಂದ ಮಕ್ಕಳ ಯಕ್ಷಗಾನ ಹಾಗೂ ನಾಟಕ ಪ್ರದರ್ಶನ

 ಮಂಗಳೂರಿನ ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ, ಹಲವಾರು ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ ಮಕ್ಕಳ ಯಕ್ಷಗಾನ ಹಾಗೂ ನಾಟಕ ಪ್ರದರ್ಶನ ನಡೆಯಿತು. ಕುಮಾರ್ ಮಾಲೆಮಾರ್ ಸಾರಥ್ಯದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಜರುಗಿತು. 

 ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿಯ ವತಿಯಿಂದ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಕಾರ್ಯಕ್ರಮ ನಡೆಯಿತು. ಸಿನೆಮಾ, ಡ್ಯಾನ್ಸ್, ಫಂಟರ್‍ಸ್, ಕರಾವಳಿ ಲಿಟಲ್ ಸ್ಟಾರ್‍ಸ್, ಡ್ಯಾನ್ಸ್, ನಾಟಕ, ಯಕ್ಷಗಾನ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ ಮಕ್ಕಳಿಂದ ಕಲಾ ಅಭಿನಯ ಯಕ್ಷಗಾನ ಮತ್ತು ನಾಟಕ ನಡೆಯಿತು. ಮಾಲೆಮಾರ್ ಫೈನ್ ಆರ್ಟ್ಸ್ ಯಕ್ಷಕಲಾ ಕೇಂದ್ರದ ಮಕ್ಕಳಿಂದ ಮಹಿಮೆದ ಮಂತ್ರ ದೇವತೆ ಖ್ಯಾತಿಯ ವಿಜಿತ್ ಶೆಟ್ಟಿ ಅಕಾಶಭವನ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲೆ ಪೌರಾಣಿಕ ಯಕ್ಷಗಾನ ಹಾಗೂ ಕುಮಾರ್ ಮಾಲೆಮಾರ್ ನಿರ್ದೇಶನ ಮತ್ತು ನಿರೂಪಣೆಯಲ್ಲಿ ಮಣ್ಣ್‌ದ ದೈವ ದೇವೆರ್ ಎಂಬ ತುಳು ಕನ್ನಡ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಬಳಿಕ ನಡೆದ ಸನ್ಮಾನ ಹಾಗೂ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು ತುಳು ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಮಕ್ಕಳಲ್ಲೂ ಸೂಕ್ತ ರೀತಿಯ ಪ್ರತಿಭೆ ಇರುತ್ತೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ. ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿ ಮಾಡುತ್ತಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು. . ಹಿರಿಯ ನಾಟಕ ರಂಗಕರ್ಮಿ ವಿ.ಜಿಪಾಲ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನ ಗುರುತಿಸಿ, ಅವರಿಗೆ ಸನ್ಮಾನ ಮಾಡುತ್ತಿರುವ ಅಭಿನಂದನೆಯಾಗಿದೆ ಅಂತಾ ತಿಳಿಸಿದರು.
ತದ ಬಳಿಕ ಮಂಗಳೂರಿನ ಸಿಆರ್‌ಪಿಎಫ್ ಯೋಧ ದಂಪತಿಗಳಾದ ಧನಂಜಯ್ ಹಾಗೂ ಯಶೋಧ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಸೂರಜ್ ಸಾಲಿಯಾನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿಯ ರೂವಾರಿ ಕುಮಾರ್ ಮಾಲೆಮಾರ್ ಅವರಿಗೆ ಶಿಷ್ಯ ವೃಂದದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಇದರ ಜೊತೆಯಲ್ಲಿ ಮಾಲೆಮಾರ್ ಫೈನ್ ಆರ್ಟ್ಸ್ ಅಕಾಡೆಮಿಯ ಮಕ್ಕಳನ್ನು ಅಭಿನಂದಿಸಲಾಯ್ತು. ಸಭಾ ಕಾರ್ಯಕ್ರಮದಲ್ಲಿ ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರಾ, ಶ್ರೀದುರ್ಗಾಪ್ರಸಾದ್ ಕೇಟರರ್‍ಸ್ ಮಾಲಕರಾದ ಪ್ರಸಾದ್ ಶೆಟ್ಟಿ, ತೃಪ್ತಿ ಕೇಟರರ್‍ಸ್ ಮಾಲಕರಾದ ಮುಖೇಶ್ ಶೆಟ್ಟಿ, ಸಮಾಜಸೇವಕಿ ಪ್ರಸನ್ನ ರವಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *