Header Ads
Breaking News

ವಿವಿಧ ಕ್ಷೇತ್ರದ ‘ಸಾಧಕರಿಗೆ ಸನ್ಮಾನ-2021′ ಕಾರ್ಯಕ್ರಮ

ಮಂಗಳೂರು ಪ್ರದೇಶ ಕ್ಯಾಥೋಲಿಕ್ ಸಭಾ ದಕ್ಷಿಣ ಸಂತ ಜೋಸೆಫ್ ವಾಜ್ ವಾರ್ಡ್ ವತಿಯಿಂದ ರಾಜಕೀಯ, ಸಾಮಾಜಿಕ, ಕ್ರೀಡೆ ಹಾಗೂ ಇತರ ಕ್ಷೇತ್ರಗಳ ‘ಸಾಧಕರಿಗೆ ಸನ್ಮಾನ-2021’ ಕಾರ್ಯಕ್ರಮ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಸಭಾಭವನದಲ್ಲಿ ನಡೆಯಿತು.

ಮಂಗಳೂರು ದಕ್ಷಿಣ ವಲಯ ಪ್ರಧಾನ ಧರ್ಮಗುರು ಫಾ.ಸಿಪ್ರಿಯನ್ ಪಿಂಟೊ ಸಾಧಕರಿಗೆ ಸನ್ಮಾನ-2021′ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರುಕಥೊಲಿಕ್ ಸಭಾದಿಂದ ನಿರಂತರ ನಡೆಯುತ್ತಿರುವ ಕಾರ್ಯಕ್ರಮಗಳಿಂದಾಗಿ ಕ್ರೈಸ್ತರಲ್ಲಿ ಸಾಮಾಜಿಕ, ರಾಜಕೀಯವಾಗಿ ಜಾಗೃತಿ ಮೂಡಲು ಸಾಧ್ಯವಾಗಿದೆ, ಸನ್ಮಾನಿತ ಸಾಧಕರಿಗೆ ಸಮಾಜದಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.


ಈ ವೇಳೆ ಮಾಜಿ ಶಾಸಕ ಜೆ.ಆರ್.ಲೋಬೊ, ಕಥೋಲಿಕ್ ಸಭಾ ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ಅಧ್ಯಕ್ಷ ಆಲ್ವಿನ್ ಜೆ.ಡಿಸೋಜ, ಆಧ್ಯಾತ್ಮಿಕ ನಿರ್ದೇಶಕ ಫಾ.ಎಡ್ವಿನ್ ಸಂತೋಷ್ ಮೊನಿಸ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *