Header Ads
Header Ads
Breaking News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಕುಂದಾಪುರದಲ್ಲಿ ಸಿಐಟಿಯುನಿಂದ ಧರಣಿ

ಕುಂದಾಪುರ: ದೇಶದ 2ಕೋಟಿ ಜನರಿಗೆ ಉದ್ಯೋಗ ಕೊಡಿಸುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಭರವಸೆ ಕೊಟ್ಟು ಅಧಿಕಾರಿಕ್ಕೆ ಬಂದ ಮೋದಿ ಸರ್ಕಾರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ಆರೋಪಿಸಿದರು.ಅವರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಕೈಬಿಡಬೇಕು ಹಾಗೂ ರೈತ, ಕೂಲಿಕಾರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಕುಂದಾಪುರದಲ್ಲಿ ನಡೆದ ಜೈಲ್ ಭರೋ ಚಳುವಳಿ ಮಾತನಾಡಿದರು.

ಕುಂದಾಪುರದ ಶಾಸ್ತ್ರಿ ಸರ್ಕಲ್‌ನಿಂದ ಆರಂಭವಾದ ಬೃಹತ್ ಕಾಲ್ನಡಿಗೆ ಜಾಥಾವು ಕುಂದಾಪುರದ ಮಿನಿ ವಿಧಾನಸೌಧದವರೆಗೂ ನಡೆಯಿತು. ಅಲ್ಲಿ ಪೊಲೀಸರು ಒಳ ಪ್ರವೇಶಿಸದಂತೆ ಭದ್ರತೆ ವಹಿಸಿದ್ದರು. ಉಪ ತಹಶೀಲ್ದಾರ್‌ಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ರಾಷ್ಟ್ರವ್ಯಾಪಿ ಈ ಪ್ರತಿಭಟನೆ ನಡೆಯುತ್ತಿದ್ದು, ಕುಂದಾಪುರದಲ್ಲೂ ಸಾವಿರಾರು ಮಂದಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply