Header Ads
Header Ads
Breaking News

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಪ್ರತಿಭಟನೆ

ಕಾರ್ಕಳ : ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಖಿಲ ಬಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಕಾರ್ಕಳದ ಪ್ರಧಾನ ಅಂಚೆ ಕಛೇರಿಯ ಮುಂದುಗಡೆ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ, ವಿಭಾಗಿ ಅಧ್ಯಕ್ಷ ವಿಠಲ ಎಸ್. ಪೂಜಾರಿ ಮಾತನಾಡಿ ಕೇಂದ್ರ ಸರ್ಕಾರ ಮತ್ತು ಅಧಿಕಾರಿ ವರ್ಗದವರು ಜಿಡಿಎಸ್ ನೌಕರರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ದೆಹಲಿ ಅಥವಾ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಮಾಡಲು ಸಿದ್ಧರಾಗಿರಬೇಕೆಂದು ಮನವಿ. ಕೇಂದ್ರ ಸರ್ಕಾರ ಮತ್ತು ಕಿವುಡು ಅಧಿಕಾರಿಗಳಿಗೆ ಬಿಸಿ ಮುಟ್ಟಸಿ ನಮ್ಮ ಹಕ್ಕನ್ನು ಮತ್ತು ಕಮಲೇಶ್‌ಚಂದ್ರ ಜಿಡಿಎಸ್ ಕಮಿಟಿ ವರದಿಯನ್ನು ಜಾರಿಗೊಳಿಸುವವರೆಗೆ ಹೋರಾಟಕ್ಕೆ ಸಿದ್ಧರಾಗಿರಬೇಕೆಂದು ಬೇಡಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಅಶೋಕ್ ಕಾರ್ಕಳ, ಕಾರ್ಕಳ ಉಪವಿಭಾಗದ ಅಧ್ಯಕ್ಷರು ಶ್ರೀಮತಿ ಶಕೀಲ, ಸುನೀಲ್ ದೇವಾಡಿಗ ಮುತಾಂದವರು ಉಪಸ್ಥಿತರಿದ್ದರು.

Related posts

Leave a Reply