Header Ads
Header Ads
Breaking News

ವಿವಿಧ ಸಂಘಗಳಿಂದ ಪುತ್ತೂರಿನಲ್ಲಿ ಆಟಿದ ಆಯನ ಪುತ್ತೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮ

 

ಪುತ್ತೂರು:ಮಹಿಳೆಯರು ಸಮಾಜದ ಇನ್ನೊಬ್ಬರ ಕಷ್ಟವನ್ನು ಅರಿತುಕೊಂಡು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು. ಸಮಾಜದಲ್ಲಿ ನಾನಾ ತೊಂದರೆಗಳಿಗೆ ಸಿಲುಕಿದವರಿಗೆ ಆತ್ಮಸ್ತೈರ್ಯ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳು ಹಾಗೂ ಸ್ತ್ರಿಶಕ್ತಿ ಗುಂಪುಗಳ ಕೆಲಸ ಮಾಡಬೇಕು ಎಂದು ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.

ವಜ್ರಮಾತ ಮಹಿಳಾ ವಿಕಾಸ ಘಟಕ, ಸಮರ್ಪಣಾ ಮಹಿಳಾ ವೇದಿಕೆ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಆ.೮ರಂದು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ‘ಆಟಿದ ಆಯನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರು ಇನ್ನೊಬ್ಬರ ಬಗ್ಗೆ ಮತ್ಸರ, ಕೇಡು ಬಗೆಯವವರಲ್ಲ.

ಇನ್ನೊಬ್ಬರ ಕಷ್ಟವನ್ನು ಅರಿತುಕೊಂಡು ಸಮಾಜಕ್ಕೆ ತಾಯಿಯಾಗಬೇಕು. ನಮ್ಮ ಪರಿಸರದಲ್ಲಿ ಯಾರಿಗಾದರು ಕಷ್ಟ ಬಂದಾಗ ಅದು ನಮಗೆ ಸಂಬಂಧಿಸಿದಲ್ಲ ಎಂದು ದೂರವಿರಬಾರದು. ಅವರ ಕಣ್ಣೀರು ಒರೆಸುವ ಕೆಲಸಮಾಡಬೇಕು ಎಂದರು. ಪ್ರಸ್ತುತ ಕಾಲದಲ್ಲಿ ಕ್ಲಲ್ಲಕ ಕಾರಣ್ಕಕಾಗಿ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳವವರೇ ಅಧಿಕ. ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ ಎಂದು ಯುವತಿಯರಿಗೆ ಆತ್ಮಸ್ಥೈರ್ಯ ನೀಡಬೇಕು. ಯಾರೇ ಅನ್ಯಾಯ ಮಾಡಿದರೂ ಅದನ್ನು ಅನ್ಯಾಯವೆಂದು ಅದನ್ನು ಎತ್ತಿತೋರಿಸಿ ಎದುರಿಸುವ ಮೂಲಕ ಮಹಿಳೆಯುರು ಸ್ವಾಭಿಮಾನದ ಬದುಕನ್ನು ಕಾಣಬೇಕು ಎಂದು ಹೇಳಿದ ಅವರು ಸ್ತ್ರೀಶಕ್ತಿ ಸಂಘಟನೆ ಸರ್ವಶಕ್ತಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಇಂದಿನ ತಳಕ್ಕು ಬಳಕ್ಕು ಜಗತ್ತಿನಲ್ಲಿ ಸಮಾಜ ಎಲ್ಲೋ ಸಾಗುತ್ತಿದೆ. ಇಂತಹ ಸಮಯದಲ್ಲೂ ಸಂಘಟನೆಗಳ ಮೂಲಕ ಪುರಾತನ ಸಂಸ್ಕಾರ, ಸಂಪ್ರದಾಯಗಳನ್ನು ನೆನಪಿಸಿವ ಕಾರ್ಯ ಯಶಸ್ವಿಯಾಗಿ ಸಾಗಲಿ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗ್ಡೆ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್, ಗೌರವ ಸಲಹೆಗಾರ ಸ್ನೇಹಲತಾ ಮಲ್ಲಾರ, ಸಮರ್ಪಣಾ ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾರತ್ನ ರೈ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಘದ ಅಧ್ಯಕ್ಷೆ ಪುಷ್ಪಾ, ತೀರ್ಪುಗಾರರಾದ ನಾರಾಯಣ ರೈ ಕುಕ್ಕುವಳ್ಳಿ, ಕವಿತಾ ಅಡೂರು ಹಾಗೂ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಸದಸ್ಯ ಹೆಸರನ್ನು ಚೀಟಿ ಎತ್ತುವ ಮೂಲಕ ಅದೃಷ್ಠ ಮಹಿಳೆಯನ್ನು ಆಯ್ಕೆ ಮಾಡಲಾಗಿದ್ದು ಸುಶೀಲ ಮೊಟ್ಟೆತ್ತಡ್ಕ(ಪ್ರ), ಸುಶೀಲ ಕೊಡಿಮರ(ದ್ವಿ) ಹಾಗೂ ನಮಿತಾ ಪುತ್ತೂರು(ತೃ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ರಂಜಿತಾ ಕುಂಡಡ್ಕ ಪ್ರಾರ್ಥಿಸಿದರು. ವಜ್ರಮಾತಾ ಮಹಿಳಾ ವಿಕಾಸ ಘಟಕದ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿಜಯಲಕ್ಷ್ಮೀ ಎಸ್ ರೈ ವಂದಿಸಿದರು. ಅಂಗನವಾಡಿ ಮೇಲ್ವಿಚಾರಕರಾದ ಜಲಜಾಕ್ಷಿ ಹಾಗೂ ಹೇಮರಾಮದಾಸ್, ಬ್ಲಾಕ್ ಸೊಸೈಟಿಯ ಗೀತಾ ಡಿ.ವಿ, ಅರುಣಾ ಬೀರಿಗ, ಸರೋಜಿನಿ ರೈ, ಸುಜಯ ರೈ, ತಾರಾಸುಂದರ ರೈ, ತುಳಸಿ, ಶಾರದಾಕೇಶವ, ಮೀನಾಕ್ಷಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

Related posts

Leave a Reply