Header Ads
Header Ads
Breaking News

ವಿಶಿಷ್ಠರಿಗಾಗಿ ವಿಶಿಷ್ಠ ಮೇಳ-2018 ಜ.7 ರಂದು ಕೆನರಾ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ರಾವ್ ಹೇಳಿಕೆ

ವಿಶಿಷ್ಠರಿಗಾಗಿ ವಿಶಿಷ್ಠ ಮೇಳವು ಜನವರಿ 8 ರಂದು ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಶಾಜ್ಯೋತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಕಾರ್ಪೊರೇಶನ್ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಇ.ಎಸ್. ನಾಗರಾಜ್ ಉಡುಪ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಹಿಸಲಿದ್ದಾರೆ ಎಂದ ಅವರು, ಈ ಮೇಳದಲ್ಲಿ ದಿವ್ಯಾಂಗರೇ ಹಾಡುವುದು, ಡ್ಯಾನ್ಸ್ ಮಾಡುವುದು, ಸ್ಪರ್ಧೆ ಆಟೋಟದಲ್ಲಿ ಭಾಗವಹಿಸುವುದು, ಕುದುರೆ ಸವಾರಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮುರಳೀಧರ್ ನಾಯ್ಕ್, ಕೋಶಾಧಿಕಾರಿ ವಿಶ್ವನಾಥ್ ಪೈ ಮತ್ತಿತ್ತರರು ಉಪಸ್ಥಿತರಿದ್ದರು.

Related posts