Header Ads
Header Ads
Breaking News

ವಿಶಿಷ್ಠ ಚೇತನರ ಸಂಘದ 25ನೇ ವಾರ್ಷಿಕ ಸಮಾವೇಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಠ ಚೇತನರ ಸಂಘದ 25ನೇ ವಾರ್ಷಿಕ ಸಮಾವೇಶವನ್ನು ಮಂಗಳೂರಲ್ಲಿ ಆಚರಿಸಲಾಯ್ತು, ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಸಿ.ನಾಕ್ ಅವರು ಉದ್ಘಾಟಿಸಿದ್ರು.

ಈ ವೇಳೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ|ಮೋಹನ್ ಆಳ್ವ ಮಾತನಾಡಿ, ವಿಶಿಷ್ಠ ಚೇತನರ ಬಗೆ ಅನುಕಂಪ ತೋರಿಸುವ ಬದಲು , ಅವರಿಗೆ ಸಹಾಯ ಹಸ್ತ ನೀಡಬೇಕು. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ರು. ಈ ವೇಳೆ ನಿಟ್ಟೆ ವಿಶ್ವ ವಿದ್ಯಾನಿಲಯ ಸಹಕುಲಧಿಪತಿ ಡಾ| ಎಂ.ಶಾಂತರಾಮ ಶೆಟ್ಟಿ, ಸಹಕಾರಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಸಂಘದ ಅಧ್ಯಕ್ಷ ಡಾ|ಮುರಳೀಧರ್ ನಾಕ್, ಸಂಘದ ಪ್ರಧಾನ ಕಾರ್ಯದರ್ಶಿ ಕೊರಗಪ್ಪ, ಸಾಮಾಜಿಕ ಕಾರ್ಯಕರ್ತ ಶ್ರೀಕರ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply