Header Ads
Header Ads
Header Ads
Breaking News

ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬಂಟ್ವಾಳದ ಬಡಗಬೆಳ್ಳೂರು

ಸೌಹಾರ್ದತೆಗೆ ಹೆಸರುವಾಸಿಯಾದ ಬಂಟ್ವಾಳದ ಬಡಗಬೆಳ್ಳೂರು, ಇಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಇಲ್ಲಿನ ಮಸ್ಜಿದುಲ್ ಇಮಾಂ ಶಿಬ್ಲಿ ಬಾಳಿಕೆ ಹಾಗೂ ಯಕ್ಷಗಾನ ಕಲಾ ಮಂಡಳಿ ಬಾಳಿಕೆ ಹಾಗೂ ಬಾಳಿಕೆ ಕುಟುಂಬ ಸಂಘಟನೆಯ ಸಹಯೋಗದೊಂದಿಗೆ ಸೌಹಾರ್ದ ಸ್ವಚ್ಚತಾ ಕಾರ್ಯಕ್ರಮ ಆಯೋಜಿಲಾಗಿತ್ತು. ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಬಿ.ಹೆಚ್ ಅಶ್ರಫ್ ಮಾತನಾಡಿ, ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸಿ ಸೌಹಾರ್ದತೆಗಾಗಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ದರ್ಮದ ಸಂಘಟನೆಗಳನ್ನು ಒಗ್ಗೂಡಿಸಿ ಊರಿನಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು. ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮಯ್ಯ, ಮಸೀದಿ ಉಪಾಧ್ಯಕ್ಷ ಹಮೀದ್, ಮೊಹನ್ ಕೊಟ್ಟಾರಿ, ವಾಮದೇವ ಟೈಲರ್, ಅಝೀಝ್, ಇಮಾಂ ಶಿಬ್ಲಿ ಖತೀಬರಾದ ಮೊಹಮ್ಮದ್ ಹನೀಫ್ ಹಸನಿ, ಸುರೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *