Header Ads
Header Ads
Breaking News

ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಜನವರಿ 16ರಂದು ಮಾಧ್ಯಮ ಕಾರ್ಯಗಾರ

ಮಾಧ್ಯಮ ಕಾರ್ಯಾಗಾರದ ಆಮಂತ್ರಣ ಪತ್ರಿಕೆಯನ್ನು ಹಂಪನಕಟ್ಟೆಯಲ್ಲಿರುವ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಗಾರವು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿ ಮತ್ತು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಜಂಟಿ ಆಶ್ರಯದಲ್ಲಿ ಜ.16ರಂದು ವಿಶ್ವವಿದ್ಯಾನಿಲಯದ “ರವೀಂದ್ರ ಕಲಾ ಭವನ”ದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾ ಡಾ.ಉದಯ ಕುಮಾರ್ ಇರ್ವತ್ತೂರು ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಪ್ರಾಥಮಿಕ ಹೊಣೆಗಾರಿಕೆಯನ್ನು ತಿಳಿದುಕೊಂಡು ಕರ್ತವ್ಯವನ್ನು ಮಾಡಬೇಕೆಂದು ಎಂದು ಹೇಳಿದರು.
ಸಂವಿದಾನದತ್ತ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮ ಪಾತ್ರ“, “ಅಭಿವೃದ್ಧಿ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲುಗಳು” ಹಾಗೂ “ಮಾಧ್ಯಮ ರಂಗ, ಆಕರ್ಷಣೆ ಭ್ರಮೆ ಮತ್ತು ಉದ್ಯೋಗವಕಾಶ” ಎಂಬ ವಿವಿಧ ವಿಚಾರಗಳ ಬಗ್ಗೆ ವಿಚಾರಗೋಷ್ಠಿಯನ್ನೊಳಗೊಂಡ ಮಾಧ್ಯಮ ಕಾರ್ಯಗಾರವು ಜ.16ರಂದು ಮಂಗಳೂರು ವಿಶ್ವವಿದ್ಯಾನಿಲಯದ “ರವೀಂದ್ರ ಕಲಾ ಭವನ”ದಲ್ಲಿ ನಡೆಯಲಿದೆ.

ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್. ಪೆರ್ಲ, ಕೋಶಾಧಿಕಾರಿ ಜ್ಯೋತಿಪ್ರಕಾಶ್ ಪುಣಚ, ಉಪಾಧ್ಯಕ್ಷರಾದ ತಾರನಾಥ್ ಗಟ್ಟಿ ಕಾಪಿಕಾಡು, ಕಾರ್ಯದರ್ಶಿಗಳಾದ ಈಶ್ವರ್ ವಾರಣಾಶಿ, ಗೋಪಾಲ್ ಅಂಚನ್, ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ಗಣಪತಿ ಗೌಡ, ಉಪನ್ಯಾಸಕ ಗುರುಪ್ರಸಾಧ್, ಹಮೀದ್ ವಿಟ್ಲ ಉಪಸ್ಥಿತರಿದ್ದರು.

Related posts

Leave a Reply