Header Ads
Header Ads
Breaking News

ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ. ನಗರದ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ.

ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ವತಿಯಿಂದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ ನಡೆಯಿತು. ನಗರದ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಭಾರ ಉಪಕುಲಪತಿಗಳಾದ ಡಾ.ಕಿಶೋರ್‌ಕುಮಾರ್‌ಸಿ.ಕೆ. ಉದ್ಘಾಟಿಸಿದ್ರು.

ಈ ವೇಳೆ ಬೆಸೆಂಟ್ ಕಾಲೇಜಿನ ಸಂಚಾಲಕರಾದ ಕೆ. ದೇವಾನಂದ ಪೈ ಮಾತನಾಡಿ, ಸಂಗೀತಕ್ಕೆ ಅಶಾಂತಿಯನ್ನು ನೀಗಿಸಿ ನೆಮ್ಮದಿ ತರುವಅದ್ಭುತ ಶಕ್ತಿಯಿದೆ ಹಾಗಾಗಿ ಸಂಗೀತ ಅಸ್ವಾದನೆ ಉತ್ತಮ ಹವ್ಯಾಸ ಎಂದು ಅಭಿಪ್ರಾಯಪಟ್ಟರು.ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ|ಸತೀಶ್ ಕುಮಾರ್ ಶೆಟ್ಟಿ, ಪ್ರಾಧ್ಯಾಪಕರಾದ ಪ್ರೋ ಅರುಣಾ ಸುರೇಶ್ , ಉಪನ್ಯಾಸಕಿಯರಾದ ರೇಷ್ಮಾ, ಸೇರಿದಂತೆ ಇನ್ನಿತರು ಉಪಸ್ಥಿತಿರಿದ್ದರು.

 

Related posts

Leave a Reply