Header Ads
Header Ads
Breaking News

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ವತಿಯಿಂದ ಈವನಿಂಗ್ ಪ್ರಿಮೀಯರ್ ಲೀಗ್ ಸೀಸನ್-1

ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ವತಿಯಿಂದ ಪ್ರಪ್ರಥಮ ಬಾರಿಗೆ ಈವನಿಂಗ್ ಪ್ರಿಮೀಯರ್ ಲೀಗ್ (ಈಪಿಎಲ್) ಸೀಸನ್-1 ವಿಶ್ವವಿದ್ಯಾನಿಲಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ ಸುಭಾಶಿನಿಣಿ ಶ್ರೀವತ್ಸ ಉದ್ಘಾಟಿಸಿದರು.ಕಾಲೇಜಿನ ಒಟ್ಟು 8 ತಂಡಗಳು ಈವನಿಂಗ್ ಪ್ರಿಮೀಯರ್ ಲೀಗ್‍ನಲ್ಲಿ ಭಾಗವಹಿಸಿದ್ದು ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳ ತಂಡ ವಿನ್ನರ್ ಹಾಗೂ ಪ್ರಥಮ ವರ್ಷದ ಎಂಕಾಂ ವಿದ್ಯಾರ್ಥಿಗಳ ತಂಡ ರನ್ನರ್ ಅಪ್ ಅನ್ನು ಪಡೆದುಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಯಾಸಿರ್ ಅರಾಫತ್, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪ್ರಜ್ವಲ್ ಹಾಗೂ ಉತ್ತಮ ಮಹಿಳಾ ಆಟಗಾರ್ತಿಯಾಗಿ ಶೀತಲ್ ಬಹುಮಾನವನ್ನು ಪಡೆದುಕೊಂಡರು.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ ರಾಮಕೃಷ್ಣ ಬಿ ಎಂ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ ಅಬೂಕ್ಕರ್ ಸಿದ್ದಿಕ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *