Breaking News

ವಿಶ್ವ ಕಪ್ ಶೂಟಿಂಗ್ ಏರ್ ಪಿಸ್ತೂಲ್ ಮಿಶ್ರ, ಜಿತು ರಾಯ್, ಹೀನಾ ಸಿಧುಗೆ ಚಿನ್ನ

ಭಾರತದ ಜಿತು ರಾಯ್ ಮತ್ತು ಹೀನಾ ಸಿಧು ಗಬಾಲ, ಅಜರ್ಬೈಜಾನ್ಇಲ್ಲಿ ನಡೆದ ಐ‌ಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಷಿಪ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಸೋಮವಾರ ನಡೆದ ೧೦ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್ನಲ್ಲಿ ಭಾರತದ ಜಿತು ಹಾಗೂ ಹೀನಾ ೭-೬ರಲ್ಲಿ ರಷ್ಯಾದ ಜೋಡಿ ಯನ್ನು ಮಣಿಸಿತು. ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ನಲ್ಲಿ ಫ್ರಾನ್ಸ್ ತಂಡ ಇರಾನ್ ಎದುರು ಗೆದ್ದಿತು. ದೆಹಲಿಯಲ್ಲಿ ನಡೆದ ವಿಶ್ವಕಪ್ ನಲ್ಲಿಯೂ ಈ ಜೋಡಿ ಮಿಶ್ರ ತಂಡ ವಿಭಾಗದಲ್ಲಿಯೇ ಚಿನ್ನ ಜಯಿಸಿತ್ತು. ಆದರೆ ಪದಕಗಳ ಪಟ್ಟಿಯಲ್ಲಿ ಈ ವಿಭಾಗವನ್ನು ಸೇರಿಸಲಾಗಿಲ್ಲ.
ಚೀನಾ ಈ ವಿಶ್ವಕಪ್ನಲ್ಲಿ ಮೂರು ಚಿನ್ನ ಗೆದ್ದು ಮೊದಲ ಸ್ಥಾನದಲ್ಲಿದೆ. ೧೦ಮೀ ವೈಯಕ್ತಿಕ ರೈಫಲ್ ವಿಭಾಗಗಳ ಅರ್ಹತಾ ಸುತ್ತಿನಲ್ಲಿ ಜಿತು ಮತ್ತು ಹೀನಾ ಕ್ರಮವಾಗಿ ೧೨ ಮತ್ತು ೯ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಮೊದಲ ಎಂಟು ಸ್ಪರ್ಧಿಗಳು ಮಾತ್ರ ಫೈನಲ್ ತಲುಪಿದ್ದರು.

Related posts

Leave a Reply