Header Ads
Header Ads
Breaking News

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೆಬ್ರವರಿ 3ರಂದು ಕದ್ರಿ ಪಾರ್ಕ್‌ನಲ್ಲಿ ಕ್ಯಾನ್ಸರ್ ಜಾಗೃತಿ ಪ್ರದರ್ಶನ

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೃಹತ್ ಕ್ಯಾನ್ಸರ್ ಜಾಗೃತಿ ಪ್ರದರ್ಶನವನ್ನು ಫೆಬ್ರವರಿ ೩ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಮತ್ತು ವಿವಿಧ ಸಂಘ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಕ್ಯಾನ್ಸರ್ ಕುರಿತ ಮಾಹಿತಿಯನ್ನು ವಿವರಿಸುವ ಸುಮಾರು ೧೦೦ ಪೋಸ್ಟರ್‌ಗಳನ್ನು ನೀಡಲಾಗುತ್ತದೆ.

ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ರಕ್ತ ರೋಗಶಾಸ್ತ್ರ ಸಲಹಾ ತಜ್ಞರಾದ ಡಾ.ಪ್ರಶಾಂತ್ ಅವರು ಮಾತನಾಡಿ, ಕ್ಯಾನ್ಸರ್ ವಿಷಯಕ್ಕೆ ಬಂದರೆ ಜಾಗೃತಿ ಎನ್ನುವುದು ಮುಖ್ಯ ವಿಷಯವಾಗಿರುತ್ತದೆ. ಈ ರೋಗ ಕುರಿತು ಅನೇಕ ತಪ್ಪು ಕಲ್ಪನೆಗಳು ಇರುತ್ತದೆ. ವಾಸ್ತವವಾಗಿ ಕ್ಯಾನ್ಸರ್ ಎಂದರೆ ಮನಸ್ಸಿಗೆ ಬರುವುದು ಭಯ. ಕೆಲವೊಂದು ಮಾಹಿತಿ ಹೊಂದಿರುವುದು ಮುಖ್ಯವಾಗಿರುತ್ತದೆ ಮತ್ತು ಹಲವಾರು ಚಿತ್ರಪಟಗಳನ್ನೊಂದಿರುವ ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಿಸುವ ಗುರಿಯನ್ನು ಈ ಪ್ರದರ್ಶನ ಹೊಂದಿದೆ ಅಂತಾ ಹೇಳಿದರು.

ಕ್ಯಾನ್ಸರ್ ಕುರಿತು ಮಾಹಿತಿಯನ್ನು ವಿವರಿಸುವ ಸುಮಾರು ೧೦೦ ಪೋಸ್ಟರ್‌ಗಳನ್ನು ಇಲ್ಲಿ ನೀಡಲಾಗುತ್ತೆ, ಲಯನ್ಸ್ ಕ್ಲಬ್ ಕದ್ರಿ ಸದಸ್ಯರಿಂದ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ೬.೩೦ಕ್ಕೆ ಸಮಾರೋಪ ಸಮಾರಂಭವನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮತ್ತು ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟ್ಟೆಂಟ್ಸ್ ನಡೆಸಿಕೊಡುತ್ತಾರೆ. ನಂತರ ಅರ್ಬುದಾಸುರ ಗರ್ವಭಂಗ ಎಂಬ ಯಕ್ಷಗಾನ ನಡೆಯಲಿದೆ. ಈ ಯಕ್ಷಗಾನವನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಸದಸ್ಯರಾಗಿರುವ ವೈದ್ಯರು ರಚಿಸಿ, ನಿರ್ದೇಶಿಸಿರುತ್ತಾರೆ. ಮಾತ್ರವಲ್ಲದೆ ಯಕ್ಷಗಾನವನ್ನು ಆಡಿ ತೋರಿಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಬಿ. ಸಚ್ಚಿದಾನಂದ ರೈ ತಿಳಿಸಿದರು.


ಸುದ್ಧಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞರಾದ ಡಾ.ಹರ್ಷ ಪ್ರಸಾದ್ , ಐಎಂಎ ಕಾರ್ಯದರ್ಶಿ ಡಾ.ತಾಜ್ ದ್ದೀನ್, ಕದ್ರಿ ಹಿಲ್ಸ್ ಲಯನ್ಸ್ ಕ್ಲಬ್ ಗೀತಾ ರಾವ್, ಉಪಸ್ಥಿತರಿದ್ದರು

Related posts

Leave a Reply