Breaking News

ವಿಶ್ವ ಟೆನ್ನಿಸ್ ರ್‍ಯಾಂಕಿಂಗ್, ಮೊದಲ ಸ್ಥಾನಕ್ಕೆ ಕೆರ್ಬರ್, ನಾಲ್ಕನೇ ಸ್ಥಾನಕ್ಕೆ ನಡಾಲ್

ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು ಹಿಂದಿಕ್ಕಿದ ಜರ್ಮನಿಯ ಏಂಜಲಿಕ್ ಕೆರ್ಬರ್ ವಿಶ್ವ ಟೆನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಡಬ್ಲ್ಯುಟಿ‌ಎ ಹೊಸ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಕೆರ್ಬರ್ ೭,೦೩೫ ಪಾಯಿಂಟ್ ಗಳಿಸಿದ್ದರೆ ಸೆರೆನಾ ವಿಲಿಯಮ್ಸ್ಗೆ ಲಭಿಸಿರುವುದು ೬,೧೧೦ ಪಾಯಿಂಟ್ಗಳು. ಮೂರನೇ ಸ್ಥಾನದಲ್ಲಿರುವ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೊವಾ ೬,೧೦೪ ಪಾಯಿಂಟ್ ಗಳಿಸಿದ್ದಾರೆ. ಕಳೆದ ವಾರ ನಡೆದ ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಕೆರ್ಬರ್ ಉತ್ತಮ ಆಟ ಆಡಿ ಗಮನ ಸೆಳೆದಿದ್ದರು. ಟೂರ್ನಿಯ ಮೂರನೇ ಸುತ್ತಿನಲ್ಲಿ ಅವರು ಯೂಜ್ನಿ ಬೌಷರ್ಡ್ ವಿರುದ್ಧ ಸೆಣಸಿದ್ದರು. ಆದರೆ ಬೆನ್ನೆಲುಬಿನ ನೋವಿನಿಂದಾಗಿ ಅರ್ಧಕ್ಕೇ ನಿರ್ಗಮಿಸಿದ್ದರು.
ಪುರುಷರ ವಿಭಾಗದಲ್ಲಿ ಸ್ಪೇನ್ನ ರಾಫೆಲ್ ನಡಾಲ್ ನಾಲ್ಕನೇ ಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ. ಬ್ರಿಟನ್ನ ಆ್ಯಂಡಿ ಮರ್ರೆ ಮೊದಲ ಸ್ಥಾನದಲ್ಲಿದ್ದಾರೆ. ರಾಫೆಲ್ ನಡಾಲ್ ಕಳೆದ ವರ್ಷದ ಅಕ್ಟೋಬರ್ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದರು. ಮ್ಯಾಡ್ರಿಡ್ ಮಾಸ್ಟರ್ಸ್ನ ಪ್ರಶಸ್ತಿ ಗೆದ್ದ ಕಾರಣ ಮತ್ತೆ ನಾಲ್ಕನೇ ಸ್ಥಾನಕ್ಕೇರುವಂತಾಗಿದೆ. ಕ್ರೊವೇಷಿಯಾದ ಬೋರ್ನಾ ಕೋರಿಕ್ ೧೮ ಸ್ಥಾನಗಳ ಏರಿಕೆಯೊಂದಿಗೆ ೪೧ನೇ ಸ್ಥಾನಕ್ಕೆ ಲಗ್ಗೆ ಇಟ್ಟು ಅಚ್ಚರಿ ಮೂಡಿಸಿದ್ದಾರೆ. ಆ್ಯಂಡಿ ಮರ್ರೆ ೧೦,೩೬೦ ಪಾಯಿಂಟ್ ಗಳಿಸಿದ್ದು ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ೬,೮೪೫ ಪಾಯಿಂಟ್ ಹೊಂದಿದ್ದಾರೆ. ಸ್ವಿಡ್ಜರ್ಲೆಂಡ್ನ ಸ್ಟಾನ್ ವಾವ್ರಿಂಕ ೫,೬೦೫ ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಾಫೆಲ್ ನಡಾಲ್ ೫,೧೯೫ ಪಾಯಿಂಟ್ ಗಳಿಸಿದ್ದಾರೆ.

Related posts

Leave a Reply