Header Ads
Header Ads
Breaking News

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೀಚ್ ಕ್ಲೀನಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಂದು ಪಣಂಬೂರು ಬೀಚ್‌ನಲ್ಲಿ ಸ್ವಚ್ಚತಾ ಕಾರ್ಯಕ್ರಮ ಜರುಗಿತು.ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ಭಾರತ ಸರ್ಕಾರ, ಕರ್ನಾಟಕ ಸರಕಾರ ಮತ್ತು ಮೀನುಗಾರಿಕ ಮಹಾವಿದ್ಯಾಲಯ, ಮಂಗಳೂರು ಹಾಗೂ ಜಿಲ್ಲಾಡಳಿತ ದಕ್ಷಿಣ ಕನ್ನಡ, ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಪಣಂಬೂರು ಬೀಚ್‌ನಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು.

ಮೀನುಗಾರಿಕಾ ಮಹಾವಿದ್ಯಾಲಯದ ಮತ್ಸ್ಯ ಸಂಪನ್ಮೂಲ ಹಾಗೂ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ ಶಿವಪ್ರಕಾಶ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ಪರಿಸರ ದಿನದ ಪ್ರಯುಕ್ತ ಬೀಚ್ ಸ್ವಚ್ಚತೆಯನ್ನು ಹಮ್ಮಿಕೊಂಡಿದ್ದು, ಪರಿಸರದ ಬಗ್ಗೆ ಕೇವಲ ಕಾಳಜಿ ವಹಿಸಿದರೆ ಸಾಕಾಗುವುದಿಲ್ಲ ಅದರ ಜೊತೆಗೆ ಪ್ರಾಯೋಗಿಕವಾಗಿ ಅದನ್ನು ಅನುಷ್ಟಾನಗೊಳಿಸಬೇಕು ಎಂದು ಹೇಳಿದರು.ಇನ್ನು ದಕ್ಷಿಣ ಕನ್ನಡ ಬೀಚ್ ಕ್ಲೀನಿಂಗ್ ಅಭಿಯಾನದ ಸಂಯೋಜಕ ಡಾ ಎಸ್ ಆರ್ ಸೋಮಶೇಖರ್ ಮಾತನಾಡಿ, ಸ್ವಚ್ಚತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಪ್ಲಾಸ್ಟಿಕ್ ಮುಕ್ತ ಬೀಚ್‌ನ್ನಾಗಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಯೋಜಕಾ ಡಾ ಎಂ ಟಿ ಲಕ್ಷ್ಮೀಪತಿ, ಮನಪಾ ಕಮಿಷನರ್ ಮಹಮ್ಮದ್ ನಜೀರ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧಿಕಾರಿ ಮಧು, ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮುಖ್ಯಸ್ಥ ಯತೀಶ್ ಬೈಕಂಪಾಡಿ, ಎಂಸಿಎಫ್, ಎಂಅರ್‌ಪಿಎಲ್, ಓಎನ್‌ಜಿಸಿಯ ಮುಖ್ಯಸ್ಥರು, ಡಾ ಮಂಜುನಾಥ್, ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಜಯಪ್ರಕಾಶ್, ದಿನೇಶ್, ಮಹೇಶ್ ಕುಮಾರ್, ಶಾಲಾ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.ಇದೇ ವೇಳೆ ನಿನಾಸಂ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನಗೊಂಡಿತು.

Related posts

Leave a Reply