Header Ads
Header Ads
Breaking News

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಣ್ಣೀರು ಬಾವಿ ಬೀಚ್‌ನಲ್ಲಿ ಸ್ವಚ್ಚತೆ ಕಾರ್ಯಕ್ರಮ.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಐದು ದಿನಗಳ ಕಾಲ ಬೀಚ್ ಕ್ಲೀನಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಂದು ತಣ್ಣೀರುಬಾವಿ ಬೀಚ್‌ನಲ್ಲಿ ಸ್ವಚ್ಚತಾ ಕಾರ್ಯಕ್ರಮ ಜರುಗಿತು.ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ, ಸರ್ಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಎವಿಎಫ್ಸು – ಕಾಲೇಜು ಆಫ್ ಫಿಶರೀಸ್, ಮಂಗಳೂರು ಮತ್ತು ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು.

ಸಹ್ಯಾದ್ರಿ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ಶ್ರೀಲತಾ, ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಬೀಚ್ ಕ್ಲೀನಿಂಗ್‌ನಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಡಲ ಕಿನಾರೆಯನ್ನು ಸ್ವಚ್ಚಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ವಿದ್ಯಾದಾಯನಿ ಶಾಲೆ, ಬರ್ಟ್ರಾಂಡ್ ರಸ್ಸೆಲ್ ಬೈಕಂಪಾಡಿ ಮತ್ತು ಕಾವೂರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಈ ಸಂದರ್ಭ ಕಾರ್ಯಕ್ರಮದಲ್ಲಿ ಫಿಶರಿಸ್ ಕಾಲೇಜಿನ ಡೀನ್ ಡಾ. ಎಸ್.ಎಂ. ಶಿವಪ್ರಕಾಶ್, ಫಿಶರಿಸ್ ಕಾಲೇಜಿ ಸಂಯೋಜಕರಾದ ಡಾ. ಲಕ್ಷ್ಮೀಪತಿ ಎಮ್.ಟಿ. ಪರಿಸರ ಪ್ರಾದೇಶಿಕ ನಿರ್ದೆಶಕರಾದ ಡಾ. ದಿನೇಶ್ ಕುಮಾರ್ ರೈ ಕೆ., ಹಿರಿಯ ಮೀನುಗಾರಿಕಾ ನಿರ್ದೇಶಕರಾದ ಡಾ. ಮಹೇಶ್ ಕುಮಾರ್, ಪರಿಸರ ಇಲಾಖೆಯ ಉತ್ತಪ್ಪ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ ರಾವ್ ಕುಂಟೆ, ರಥಬೀದಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಲಲಿತಾ ಬಿ. ರಾವ್ ಉಪಸ್ಥಿತರಿದ್ದರು.

Related posts

Leave a Reply