Breaking News

ವಿಶ್ವ ಫುಟ್‌ಬಾಲ್ ಗೋಲು ಗಳಿಕೆ, ಸರಾಸರಿಯಲ್ಲಿ ಲೋಕ ಖ್ಯಾತರ ಸಮ ಸುನಿಲ್ ಚೇಟ್ರಿ

ಭಾರತ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಶ್ರೇಯವನ್ನು ಮುಡಿಗೇರಿಸಿಕೊಂಡಿದ್ದಾರೆ.
ಜೂನ್ ೧೩ರಂದು ಬೆಂಗಳೂರಿನಲ್ಲಿ ನಡೆದ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿದ ಅವರು ವೈಯಕ್ತಿಕ ಗೋಲುಗಳ ಸಂಖ್ಯೆಯನ್ನು ೫೪ಕ್ಕೆ ಏರಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ ಒಂದು ಗೋಲಿನಿಂದ ಜಯ ಗಳಿಸಿತ್ತು. ಬೆಂಗಳೂರಿನಲ್ಲಿ ಗಳಿಸಿದ ಗೋಲಿನ ಮೂಲಕ ಚೆಟ್ರಿ ಇಂಗ್ಲೆಂಡ್ನ ವೇನ್ ರೂನಿ ಅವರನ್ನು ಹಿಂದಿಕ್ಕಿದ್ದರು. ರೂನಿ ೧೧೯ ಪಂದ್ಯಗಳಲ್ಲಿ ೫೩ ಗೋಲು ಗಳಿಸಿದ್ದಾರೆ. ಚೆಟ್ರಿ ತಮ್ಮ ೯೪ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಅಮೆರಿಕದ ಕ್ಲಿಂಟ್ ಡೆಂಪ್ಸಿ ಈಗ ಚೆಟ್ರಿ ಅವರಿಗಿಂತ ಮುಂದೆ ಇದ್ದಾರೆ. ಆದರೆ ಭಾರತದ ಆಟಗಾರ ಗೋಲು ಸರಾಸರಿಯಲ್ಲಿ ರೊನಾಲ್ಡೊ, ಮೆಸ್ಸಿ, ಡೆಂಪ್ಸಿ ಮತ್ತು ರೂನಿ ಅವರನ್ನು ಹಿಂದಿಕ್ಕಿ ಗಮನ ಸೆಳೆದಿದ್ದಾರೆ. ಅವರು ೦.೫೭ ಗೋಲು ಸರಾಸರಿ ಹೊಂದಿದ್ದಾರೆ. ಬ್ರೆಜಿಲ್ನ ನೇಮರ್ ಜೂನಿಯರ್, ಮಾಲ್ಡೀವ್ಸ್ನ ಅಲಿ ಅಶ್ಫಾಕ್ ಇಬ್ಬರೂ ೦.೬೮ ಹಾಗೂ ಬೋಸ್ನಿಯಾದ ಈಡನ್ ಜೆಂಕೊ ೦.೬೩ ಮಾತ್ರ ಚೆಟ್ರಿ ಅವರಿಗಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ನಿವೃತ್ತರಾದ ಮತ್ತು ಈಗ ಆಡುತ್ತಿರುವ ಮೊದಲ ೩೦ ಮಂದಿ ಆಟಗಾರರ ಪಟ್ಟಿಯಲ್ಲೂ ಚೆಟ್ರಿ ಸ್ಥಾನ ಗಳಿಸಿದ್ದಾರೆ. ಇನ್ನು ಆರು ಗೋಲು ಗಳಿಸಿದರೆ ಅವರು ಮೊದಲ ೨೦ ಆಟಗಾರರ ಪಟ್ಟಿಯಲ್ಲಿ ಸೇರಲಿದ್ದಾರೆ.

Related posts

Leave a Reply