Header Ads
Breaking News

ಪುತ್ತೂರಿನ ಚೈತನ್ಯ ಮಿತ್ರ ವೃಂದದಿಂದ ವಿಶ್ವ ಯೋಗ ದಿನಾಚರಣೆ

ಪುತ್ತೂರಿನ ಚೈತನ್ಯ ಮಿತ್ರ ವೃಂದ ಪಡೀಲು ಇವರ ವತಿಯಿಂದ “ವಿಶ್ವ ಯೋಗ ದಿನಾಚರಣೆ ” ಅಂಗವಾಗಿ ಸಾಂಕೇತಿಕವಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಸ್ಥಳೀಯ ನಗರಸಭಾ ಸದಸ್ಯರಾದ ಪದ್ಮನಾಭ ನಾಯ್ಕ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಒತ್ತಡ ರಹಿತ ಜೀವನಕ್ಕೆ ಯೋಗವು ಒಂದು ಸುಲಭ ಸಾಧ್ಯವಾದ ಮಾರ್ಗವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ವೃಂದದ ಹಿರಿಯ ಸದಸ್ಯರಾದ ಗಣೇಶ್ ಯನ್, ಅಧ್ಯಕ್ಷರಾದ ಪುರಂದರ್ ಪಿ. ಕಾರ್ಯದರ್ಶಿ ಗಣೇಶ್ ಬಿ, ಸೌಮ್ಯ ಪುರಂದರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *