Header Ads
Header Ads
Header Ads
Breaking News

ವಿಶ್ವ ಲಕ್ವ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮ ಯಶಸ್ವಿ ಕೆ‌ಎಂಸಿ ಆಸ್ಪತ್ರೆಯ ವತಿಯಿಂದ ಸುದ್ದಿಗೋಷ್ಠಿ ಡಾ. ಆನಂದ್ ವೇಣುಗೋಪಾಲ್ ಮಾಹಿತಿ

ಮಂಗಳೂರಿನ ಕೆ‌ಎಂಸಿ ಆಸ್ಪತ್ರೆಯ ವತಿಯಿಂದ ವಿಶ್ವ ಲಕ್ವ ದಿನದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೆ‌ಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹು ವಿಭಾಗೀಯ ಲಕ್ವ ಆರೈಕೆಯಲ್ಲಿ ನಗರದ ಏಕೈಕ ಸಮಗ್ರ ಕೇಂದ್ರವಾಗಿರುವ ಆಸ್ಪತ್ರೆ ಅನೇಕ ಪಾರ್ಶ್ವವಾಯು ಆಘಾತಕ್ಕೆ ಒಳಗಾದ ಜನರನ್ನು ಉಳಿಸುವಲ್ಲಿ ಅವರ ವೈದ್ಯಕೀಯ ನಿರ್ವಹಣೆಯಲ್ಲಿ ಯಶಸ್ವಿಯಾಗಿದೆ. ಮಂಗಳೂರು ಜನರಲ್ಲಿ ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಯಿತು. ಕೆ‌ಎಂಸಿ ಆಸ್ಪತ್ರೆಯಿಂದ ಲೈಟ್‌ಹೌಸ್ ಹಿಲ್ ರಸ್ತೆಯ ಕಸ್ತೂರ ಬಾ ಕಾಲೇಜಿನವರೆಗೆ ವಾಕಥಾನ್ ಒಂದನ್ನು ಆಯೋಜಿಸಲಾಯಿತು. ಅಂತರ ಕಾಲೇಜು ರಸಪ್ರಶ್ನೆ ಮತ್ತು ಕೊಲಾಜ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅನೆಕ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಇವುಗಳಲ್ಲಿ ಭಾಗವಹಿಸಿದ್ದರು ಎಂದರು.

ಅನಂತರ ಕೆ‌ಎಂಸಿ ಆಸ್ಪತ್ರೆಯ ನರರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮತ್ತು ಸಲಹಾ ಸಮಿತಿಯ ತಜ್ಞರಾದ ಡಾ. ಜೆಡ್ ಕೆ. ಮಿಸ್ರಿ, ಮಾತನಾಡಿ, ಲಕ್ವ ಎಂದರೆ ಸಾಮಾನ್ಯವಾಗಿ ಮಿದುಳಿನ ಆಘಾತ ಎಂದೇ ತಿಳಿಯಲಾಗಿದ್ದು, ಮಿದುಳಿಗೆ ರಕ್ತದ ಪರಿಚಲನೆ ಕಡಿಮೆಯಾಗುವುದರಿಂದ ಇದು ಉಂಟಾಗುತ್ತದೆ ಎಂದು ಮಾಹಿತಿ ನೀಡಿದರು.

ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ಕೀರ್ತಿ ರಾಜ್, ಡಾ. ಮಯೂರ್ ಕಾಮತ್, ಡಾ. ಜೀದು ರಾದಾಕೃಷ್ಣನ್, ಶಿವಾನಂದ ಪೈ ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply