Header Ads
Header Ads
Breaking News

ವಿಶ್ವ ಸ್ತನ್ಯಪಾನ ದಿನಾಚರಣೆ. ಕಣಚೂರು ಮೆಡಿಕಲ್ ಕಾಲೇಜು ವತಿಯಿಂದ ಕಾರ್ಯಕ್ರಮ. ಆಶಾ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಾಗಾರ.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಇದರ ಸಮುದಾಯ ಆರೋಗ್ಯ ವಿಭಾಗದ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ದಿನಾಚರಣೆ ಮತ್ತು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಚಿಕಿತ್ಸಾ ವಿಭಾಗ ಮತ್ತು ಹೆರಿಗೆ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಆಶಾ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಆಡಳಿತ ನಿರ್ದೇಶಕ ಅಬ್ದುಲ್ ರಹೆಮಾನ್ ಕಣಚೂರು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಣಚೂರು ಸಮೂಹ ಸಂಸ್ಥೆ ಆಸ್ಪತ್ರೆ ಪ್ರಾರಂಭಿಸಿದ ಎಲ್ಲಾ ರೀತಿಯಲ್ಲಿ ಯಶಸ್ಸು ಕಂಡಿದೆ.   ಸಾರ್ವಜನಿಕರಿಗೆ ಉತ್ತಮ ಸೇವೆ ನಿಡುವ ಮ?ಲಕ ಆಸ್ಪತ್ರೆ ಹೆಸರುವಾಸಿಯಾಗಿದೆ. ಇನ್ನೂ ಮುಂದೆವು ಎಲ್ಲರ ಸಹಕಾರ ತೋರುತ್ತದೆ ಎಂದು ಹೇಳಿದರು.ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಥ ಡಾ. ಕದ್ರಿ ಯೋಗೀಶ್ ಬಂಗೇರ ಮಾತನಾಡಿ ಮಗು ಹುಟ್ಟಿದ ನಂತರ ತಾಯಿಯ ಎದೆಹಾಲು ಲಸಿಕೆಗೆ ಸಮಾನವಾಗಿದೆ. ತಾಯಿ ಸರಿಯಾಗಿ ಹಾಲು ಕೊಟ್ಟರೆ ಬ್ರಡಸ್ಟ್ ಕ್ಯಾನ್ಸರ್ನಿಂದ ಮುಕ್ತವಾಗಬಹುದು. ಮಗುವಿನಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎದೆ ಹಾಲನ್ಬು ಒಂದು ವರ್ಷದವರೆಗೆ ಕಡ್‌ಅಯವಾಗಿ ನೀಡಬೇಕು. ನಂತರದ ದಿನಗಳಲ್ಲಿ ಮಗು ಇತರ ಆಹಾರ ಸ್ವೀಕರಿಸುವ ವರೆಗೆ ಸ್ತನ್ಯಪಾನ ನೀಡುವುದರಲ್ಲಿ ತಪ್ಪಿಲ್ಲ ಎಂದರು.

ಉಮಾ ಮಾತನಾಡಿ ತಾಯಿ ಹಾಲು ಅಮೃತ ಅದಕ್ಕಿಂತ ದೊಡ್ಡ ಸಂಜೀವಿನಿ ಬೇರೊಂದಿಲ್ಲ. ಮಗು ಹುಟ್ಟಿದ ನಾಲ್ಕು ತಿಂಗಳು ಕೇವಲ ಸ್ತನ್ಯಪಾನ ಮಾತ್ರ ಮಾಡಬೇಕು. ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ನಿಟ್ಟಿನಲ್ಲಿ ಸ್ತನ್ಯಪಾನ ಅತೀ ಅಗತ್ಯ ಎಂದರು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ರೋಹಣ್ ಮೋನಿಸ್,ವೈದ್ಯಕೀಯ ಆಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಥ ಡಾ. ಕದ್ರಿ ಯೋಗೀಶ್ ಬಂಗೇರ , ನಾಟೆಕಲ್ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಉಮಾದೇವಿ ಉಪಸ್ಥಿತರಿದ್ದರು.ಆಶಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನೂರುಲ್ಲಾ, ಸಮುದಾಯ ಆರೋಗ್ಯ ವಿಭಾಗದ ಡಾ. ಪ್ರಜ್ಞಾ, ಸ್ತ್ರೀರೋಗ ಮತ್ತು ಪ್ರಸವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ರೇಖಲತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು .ಕಾರ್ಯಾಗಾರದಲ್ಲಿಕರ್ನಲ್ ಡಾ. ಕಿರಣ್ ಕುಮಾರ್ ಸ್ವಾಗತಿದರು. ಡಾ. ಸಬಾ ಮನ್ಸೂರು ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply