Header Ads
Header Ads
Breaking News

ವಿಷ್ಣುವರ್ಧನ್ ಸ್ಮಾರಕ ವಿವಾದ,ನಮ್ಮೆಲ್ಲರಿಗೂ ಅಸಹಾಯಕತೆ ಇದೆ: ಜಯಮಾಲಾ ಹೇಳಿಕೆ

ವಿಷ್ಣುವರ್ಧನ್ ಅವರ ಸ್ಮಾರಕ ವಿವಾದ ಬಗ್ಗೆ ನಿನ್ನೆ ಉಡುಪಿ ಜಿಲ್ಲೆಯಲ್ಲಿ ಸಚಿವೆ ಜಯಮಾಲಾ ಮಾತನಾಡಿ ಸ್ಮಾರಕ ವಿಚಾರದ ಬಗ್ಗೆ ಭಾರತಿ ಅವರ ಬೇಸರ ಸಹಜ ಈಗಾಗಲೇ ಸ್ಮಾರಕದ ವಿಚಾರವಾಗಿ ಸಣ್ಣ ತಕರಾರು ಇದ್ದು ಇದನ್ನು ಸರಿಪಡಿಸುವಂತಹ ಕೆಲಸ ನಡೀತಾ ಇದೆ ಎಂದು ತಿಳಿಸಿದರು.

ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಒಂಬತ್ತು ವರ್ಷ ಆಗಿದೆ ಭಾರತಿ ಅವರ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳ್ತಿದ್ದಾರೆ. ಮೈಸೂರು ಅಂದ್ರೆ ವಿಷ್ಣುವರ್ಧನ್ ಗೆ ಪ್ರಾಣ. ವಿಷ್ಣು ಅವರ ಆಸೆ ಏನು ಎನ್ನುವುದು ಅವರ ಕುಟುಂಬಕ್ಕೆ ಗೊತ್ತಿದೆ. ಸಿಎಂ ಕುಮಾರಸ್ವಾಮಿ ಕೂಡ ಸಿನಿಮಾರಂಗದ ಅವರೇ ಆಗಿರುವುದರಿಂದ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ .ಭೂಮಿಗೆ ಸಂಬಂಧಪಟ್ಟಂತೆ ಸಣ್ಣ ತಕರಾರು ಇದೆ. ನಿನ್ನೆ ಮುನಿರತ್ನ ಹಾಗೂ ಮಂಜು ಅವರು ಸಂಧಾನ ಮಾಡಿ ಚರ್ಚೆ ನಡೆಸಿದ್ದಾರೆ ಈ ವಿಷಯ ತಿಳಿಸಿದ್ದಾರೆ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದರೆ ವಿವಾದ ಸೃಷ್ಟಿಯಾಗುತ್ತಿದೆ. ಹೀಗೆ ಯಾಕೆ ಗೊತ್ತಿಲ್ಲ. ನಾವೆಲ್ಲರೂ ಭಾರತೀ ಅವರ ಪರ ನಿಲ್ತೇವೆ ಅಂತ ತಿಳಿಸಿದರು. ಇನ್ನು ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ನಟಿ ರಮ್ಯಾ ಭಾಗವಹಿಸದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಅಂಬರೀಶ್ ಅವರ ವೈಕುಂಟ ಸಮಾರಾಧನೆಗೆ ರಮ್ಯಾ ಅವರು ಬರಬಹುದು. ಅನಾರೋಗ್ಯದ ಕಾರಣವನ್ನು ಈಗಾಗಲೇ ಅವರು ನೀಡಿದ್ದಾರೆ ಎಂದಷ್ಟೇ ತಿಳಿಸಿದರು. ಇನ್ನು ಸಚಿವ ಸ್ಥಾನ ಆಕಾಂಕ್ಷಿಗಳ ಶಾಸಕರು ಮುಂಬೈ ಗೆ ತೆರಳಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಹೋಗುವವರು ಹೋಗುತ್ತಾರೆ ಸರಕಾರ ಭದ್ರವಾಗಿದೆ. ಅಸಮಾಧಾನ ಇರುವುದು ಎಲ್ಲಾ ಸುಳ್ಳು ಅಂತ ಸ್ಪಷ್ಟೀಕರಣ ನೀಡಿದರು.

 

Related posts

Leave a Reply