Header Ads
Header Ads
Header Ads
Breaking News

ವಿಹಿಂಪ, ಭಜರಂಗದಳ ಜಾಗೃತಿ ಜಾಥಾ ಚೀನಾವನ್ನು ಮಂಡಿಯೂರಿಸುವ ತಾಕತ್ತು ಭಾರತಕ್ಕಿದೆ ಶ್ರೀ ಕೃಷ್ಣ ಉಪಾಧ್ಯಾಯ ಹೇಳಿಕೆ

 
ಭಾರತ ಇಂದು ಜಾಗತಿಕ ಶಕ್ತಿ. ಚೀನಾವನ್ನು ಮಂಡಿಯೂರಿಸಿ ಕುಳಿತುಕೊಳ್ಳಿಸುವ ಶಕ್ತಿ ಭಾರತಕ್ಕಿದೆ. ಇದಕ್ಕೆ ಪೂರಕವಾಗಿ ಚೀನಾದ ಉತ್ಪನ್ನ ಖರೀದಿ ನಿಲ್ಲಿಸಿದರೆ, ದೊಡ್ಡ ಪೆಟ್ಟು ನೀಡಿದಂತೆ ಎಂದು ಸ್ವಚ್ಛ ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.ಅವರು, ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ವತಿಯಿಂದ ಪುತ್ತೂರು ಬಸ್‌ನಿಲ್ದಾಣ ಬಳಿ ನಡೆದ ಚೀನಾ ವಸ್ತು ಬಹಿಷ್ಕರಿಸಿ- ಜಾಗೃತಿ ಜಾಥಾದಲ್ಲಿ ಮಾತನಾಡಿದರು.

           ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆ ಬಂಡವಾಳ ಹೂಡುವಂತೆ ಪಾಕಿಸ್ತಾನ ಚೀನಾಗೆ ಆಹ್ವಾನ ನೀಡಿತ್ತು. ಇದನ್ನು ಮನ್ನಿಸಿ ೪೯ ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಚೀನಾ ಹೂಡಿಕೆ ಮಾಡಿತು. ಇದರಡಿ ರಸ್ತೆ, ರೈಲು ಮಾರ್ಗ, ಗ್ಯಾಸ್ ಪೈಪ್‌ಲೈನ್ ಮೊದಲಾದ ಕಾಮಗಾರಿ ನಡೆಯುತ್ತಿದೆ. ಒಂದು ವೇಳೆ ಭಾರತ- ಪಾಕ್ ಯುದ್ಧವಾದರೆ ಭಾರತ ಗೆಲ್ಲುವುದು ಖಚಿತ. ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ,ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಜಯಂತಿ ನಾಯಕ್, ವಿಶ್ವ ಹಿಂದೂ ಪರಿಷದ್ ಅಧ್ಯP ಜನಾರ್ದನ ಬೆಟ್ಟ , ಬಜರಂಗದಳ ನಗರ ಸತ್ಸಂಗ ಪ್ರಮುಖ್ ವಿಶಾಖ್ ರೈ,ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply