Header Ads
Header Ads
Breaking News

ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2:ಎರಡನೇ ಸುತ್ತಿನ ಮೂರನೇ ಹಂತದ ಕಾಮಿಡಿ ಪಂದ್ಯಾವಳಿ

ಜನಮನ ಗೆದ್ದ ವಿ೪ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -2’ ಈಗಾಗಲೇ ಯಶಸ್ವಿಯಾಗಿ ತುಳುನಾಡಿನ ಜನರನ್ನು ನಕ್ಕುನಗಿಸುತ್ತಿದೆ. ದ್ವಿತೀಯ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ರಸದೌತಣವನ್ನು ಒದಗಿಸಿರುವ ಕಾಮಿಡಿ ಪ್ರೀಮಿಯರ್ ಲೀಗ್‌ನ ಮೂರನೇ ಸುತ್ತಿನ ಪಂದ್ಯ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ತುಂಬಿದ ಪ್ರೇಕ್ಷಕರ ನಡುವೆ ನಡೆದ ಕಾರ್ಯಕ್ರಮವು ದೀಪಾವಳಿ ಹಬ್ಬದ ಬೆನ್ನಲ್ಲೇ ನಗೆಹಬ್ಬದ ಸಂತಸವನ್ನು ನೀಡಿತು.

ಕಾಮೆಡಿ ಪ್ರೀಮಿಯರ್ ಲೀಗ್. ತನ್ನ ಸುದ್ದಿ, ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮನೆಮಾತಾಗಿರುವ ವಿ೪ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ. ಮೊದಲ ಆವೃತ್ತಿಯಲ್ಲಿ ಜನಮನ ರಂಜಿಸಿ ಜನರ ಮನಗೆದ್ದಿರುವ ಸಿಪಿಎಲ್ ಇದೀಗ ಮತ್ತೊಂದು ಸುತ್ತಿನ ಮನರಂಜನಾ ಹಬ್ಬಕ್ಕೆ ತೆರೆದುಕೊಂಡಿದೆ. ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್‍ಸ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಈಗಾಗಲೇ ಜನಮನ ಸೂರೆಗೊಂಡಿದೆ. ದ್ವಿತೀಯ ಆವೃತ್ತಿಯ ಮೂರನೇ ಸುತ್ತಿನಲ್ಲಿ ನಡೆದ ಆರು ತಂಡಗಳ ಭರ್ಜರಿ ಪ್ರದರ್ಶನ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.

ಮಂಗಳೂರಿನ ಕುದ್ಮುಲ್ ರಂಗರಾವ್‌ಪುರಭವನದಲ್ಲಿ ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ದ್ವಿತೀಯ ಆವೃತ್ತಿಯ ಮೂರನೇ ಸುತ್ತಿನ ಪಂದ್ಯ ಪ್ರದರ್ಶನಗೊಂಡಿತು. ಸಿಪಿಎಲ್ ಸೀಸನ್ 2ನ ಮೂರನೇ ಹಂತದ ಮೊದಲ ಸ್ಪರ್ಧೆಯು ಬಿಯುಮೊಂಡ್ ರಾಜಶ್ರೀ ಕುಡ್ಲ ಮತ್ತು ವಿನು ತೆಲಿಕೆದ ತೆನಾಲಿ ತಂಡಗಳ ನಡುವೆ ನಡೆಯಿತು.

ದ್ವಿತೀಯ ಸ್ಪರ್ಧೆಯುಕಾರ್ಯಕ್ರಮದಲ್ಲಿ ಬಹುನಿರೀಕ್ಷಿತ ತುಳು ಚಲನಚಿತ್ರ ’ಕರ್ಣೆ’ ಚಿತ್ರದ ನಿರ್ಮಾಪಕ ರಕ್ಷಿತ್, ನಿರ್ದೇಶಕ ಸಾಕ್ಷತ್ ಮಲ್ಪೆ, ನಟಿ ಚಿರಶ್ರೀ ಪಾಲ್ಗೊಂಡು ಚಿತ್ರದ ಬಗ್ಗೆ ವಿವರಿಸಿದರು. ಜೊತೆಗೆ ಮತ್ತೊಂದು ಹೈಎಕ್ಸ್‌ಪೆಕ್ಟೆಡ್ ತುಳು ಚಲನಚಿತ್ರ ’ಉಮಿಲ್’ನ ನಿರ್ದೇಶಕ ರಂಜಿತ್ ಸುವರ್ಣ, ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ್ ಕಟೀಲ್ ಭಾಗವಹಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.ವಿಶೇಷ ಆಕರ್ಷಣೆಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಂಗಳೂರಿನ ಸಾನಿಧ್ಯ ಭಿನ್ನಸಾಮರ್ಥ್ಯದ ಮಕ್ಕಳ ಮೂಲಕ ನಡೆದ ಅದ್ಭುತ ಪ್ರದರ್ಶನವು ಪ್ರೇಕ್ಷಕರೆದುರು ತುಳುನಾಡಿನ ಭವ್ಯ ಸಂಸ್ಕೃತಿಯನ್ನು ತೆರೆದಿಟ್ಟಿತು. ಇದೇ ಸಂದರ್ಭದಲ್ಲಿ ಮಾರುಕಟ್ಟೆಗೆ ನೂತನವಾಗಿ ಲಗ್ಗೆಯಿಟ್ಟ ಯುಎಂ ಕಂಪನಿಯ ನೂತನ ಬೈಕ್‌ನ್ನು ಅನಾವರಣಗೊಳಿಸಲಾಯಿತು. ಅಲ್ಲದೆ, ಕುಂಬ್ಳೆ ಸೋಲಾರ್ ಮತ್ತು ವಿ೪ ನ್ಯೂಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಧನ್‌ರಾಶಿ ಕಾರ್ಯಕ್ರಮವನ್ನು ಲಾಂಚ್ ಮಾಡಲಾಯಿತು.

 ಸಿಪಿಎಲ್ ಸೀಸನ್ 2 ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‌ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರಾಗಿ ಖ್ಯಾತ ಹಿರಿಯ ರಂಗಕಲಾವಿದರಾದ ಸರೋಜಿನಿ ಶೆಟ್ಟಿ, ಚಂದ್ರಹಾಸ್ ಉಳ್ಳಾಲ್, ಸಂತೋಶ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೆನೆಟ್ ಜಿ ಅಮ್ಮನ್ನ ಭಾಗವಹಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಪ್ರದರ್ಶನ ನೀಡಿದ ತಂಡಗಳಿಗೆ ೫ ಸಾವಿರ ರೂ. ಗೌರವಧನವನ್ನೊಳಗೊಂಡ ವಿ4 ನ್ಯೂಸ್ ಸೀಸನ್ ಅವಾರ್ಡ್, ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ವತಿಯಿಂದ ಮೂವೀ ಟಿಕೆಟ್ ಕೂಪನ್, ಚಾಕೊಲೇಟೀ ವಿಶ್ ವತಿಯಿಂದ ಕಸ್ಟಮೈಸ್ಡ್ ಚಾಕೊಲೇಟ್‌ಗಳನ್ನು ವಿತರಿಸಲಾಯಿತು.

ವಿನು ತೆಲಿಕೆದ ತೆನಾಲಿ ತಂಡದ ಮಾಲಕ ವಿನು ವಿಶ್ವನಾಥ್ ಶೆಟ್ಟಿ, ಮುನೀಶ್ ಕುಡ್ಲ ಕುಸಾಲ್ ತಂಡದ ಮಾಲಕ ಮುನೀಶ್, ಚಾಕೊಲೇಟೀ ವಿಶ್‌ನ ಮಾಲಕ ಹರ್ಷ ಕಾಮತ್, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಕೀಯ ಆಡಳಿತಾಧಿಕಾರಿ ಹಾಗೂ ರೋಟರಿ ಕ್ಲಬ್ ಮಂಗಳೂರಿನ ಅಂತಾರಾಷ್ಟ್ರೀಯ ಸೇವೆಗಳ ಸಲಹೆಗಾರ ಡಾ. ರೋಹನ್ ಮೋನಿಸ್, ಅಹ್ಮದೀಯ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಗೂ ಯುಗರಶ್ಮಿ ಮಾಸಿಕದ ಸಂಪಾದಕ ಮೊಹಮ್ಮದ್ ಯೂಸುಫ್, ಸೂರಜ್ ಇಂಟರ್‌ನ್ಯಾಶನಲ್‌ನ ಡಾ. ಮಂಜುನಾಥ್ ಶ್ರೀಪಾದ್ ರೇವಣ್ಕರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ಬಿ. ರೈ ಕೆಎಂಸಿ ಆಸ್ಪತ್ರೆಯ ಅನಸ್ತೇಶಿಯಾ ವಿಭಾಗ ಮುಖ್ಯಸ್ಥ ಡಾ. ರಂಜನ್ ಆರ್.ಕೆ., ಉದ್ಯಮಿ ಪಾದೆ ಅಜಿತ್ ರೈ, ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ಮ್ಯಾನೇಜರ್ ಯು. ಸುಬ್ರಾಯ ಪೈ, ರಾಯಲ್ ಹೆವನ್ ರೋಸ್ ಪೋಪಿ ಕಲಾವಿದರು ತಂಡದ ಮಾಲಕ ಮುಸ್ತಫಾ ಪ್ರೇಮಿ, ಎಸ್ಸೆನ್ ವಿರ್ಗೋ ಸಂಸ್ಥೆಯ ಪ್ರತಿನಿಧಿ ಶ್ರವಣ್, ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ, ವಿ೪ ನ್ಯೂಸ್ ನಿರ್ದೇಶಕ ಲಕ್ಷ್ಮಣ್ ಕುಂದರ್, ವಿ4 ನ್ಯೂಸ್‌ನ ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ, ರೆಡ್‌ಎಫ್‌ಎಂ ಸ್ಟೇಷನ್ ಹೆಡ್ ಶೋಭಿತ್ ಶೆಟ್ಟಿ, ಆರ್‌ಜೆ ಪ್ರಸನ್ನ, ಆರ್‌ಜೆ ಯಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಗಣ್ಯರಿಗೆ, ವಿಶೇಷ ತೀರ್ಪುಗಾರರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಹೆವೆನ್‌ರೋಸ್ ವತಿಯಿಂದ ಅದೃಷ್ಟ ಕೂಪನ್ ಯೋಜನೆಯನ್ನು ಅಳವಡಿಸಲಾಗಿದ್ದು, ವಿಜೇತ ವೀಕ್ಷಕರಿಗೆ ಉಚಿತ ಹೆವೆನ್ ರೋಸ್ ಫ್ರೀ ಸ್ಪಾ ಕೂಪನ್ ಮತ್ತು ಸುಚಿತ್ರ, ಪ್ರಭಾತ್ ಚಿತ್ರಮಂದಿರದ ವತಿಯಿಂದ ಉಚಿತ ಮೂವಿ ಟಿಕೆಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯುಎಂ ರೆನಿಗೇಡ್ ಬೈಕ್ಸ್, ಫೋಕ್ಸ್‌ವೇಗನ್, ಆಟೋಮಾಟ್ರಿಕ್ಸ್, ಅನಘಾ ಸುಝುಕಿ, ಗೋಹೀಲ್, ನಂದಿನಿ ಸಂಸ್ಥೆಗಳ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು.

ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್‍ಸ್ ಸಹಭಾಗಿತ್ವದಲ್ಲಿ ಕಾಮೆಡಿ ಪ್ರೀಮಿಯರ್ ಲೀಗ್ ಸೀಸನ್ 2 ಮನರಂಜಿಸಲಿದೆ. ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆವರೇಜ್ ಪಾರ್ಟ್‌ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‌ಟೈನ್ಮೆಂಟ್ ಪಾರ್ಟ್‌ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‌ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋರ್ಟ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‌ಎಫ್‌ಎಂ, ಎಸ್‌ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2ಜನಮನ ಗೆಲ್ಲುತ್ತಿದೆ.

 

Related posts

Leave a Reply