Header Ads
Header Ads
Breaking News

ವಿ.ವಿ ಕಾಲೇಜಿನಲ್ಲಿ ‘ಕುವೆಂಪು ನಮನ’ ಸಲ್ಲಿಸಿದ ಗಣ್ಯರು

ಕುವೆಂಪು ನಮನ ಕಾರ್ಯಕ್ರಮವು ವಿಶ್ವ ವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾರ್ಕಳದ ಭುವನೇಂದ್ರ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ ರಾಮಚಂದ್ರ ಉದ್ಘಾಟಿಸಿದರು. ಬಳಿಕ ಕ್ರಾಂತಿಕಾರಿ, ಕವಿ, ವಾಗ್ಮಿ ಎಂಬೆಲ್ಲಾ ಶ್ರೇಯಗಳು ಕುವೆಂಪುರವರಿಗೆ ಸಲ್ಲುತ್ತವೆ. ಅವರೊಬ್ಬ ಬಹುಮುಖ ಪ್ರತಿಭೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನ ಎಂದು ಅಭಿಪ್ರಾಯಪಟ್ಟರು.ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಅಜಕ್ಕಳ ಗಿರೀಶ್ ಭಟ್ ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಂಶುಪಾಲ ಡಾ ಉದಯ ಕುಮಾರ ಎಂ ಎ. ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ ಆರ್ ವಾಸುದೇವ, ಕಾಲೇಜಿನ ಕನ್ನಡ ಸಂಘದ ಸಹ ನಿರ್ದೇಶಕರಾದ ಡಾ ರತ್ನಾವತಿ ಉಪಸ್ಥಿತರಿದ್ದರು.

Related posts

Leave a Reply