Header Ads
Breaking News

ಜುಲೈ3ರಂದು ಅಕ್ರಮ ಕಸಾಯಿಖಾನೆ ವಿರುದ್ಧ ಪ್ರತಿಭಟನೆ : ಬಜರಂಗದಳದ ಸಹಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಹೇಳಿಕೆ

ವಿಶ್ವ ಹಿಂದು ಪರಿಷತ್ ಬಜರಂಗದಳ, ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಜುಲೈ 3ರಂದು ಬುಧವಾರ ಅಕ್ರಮ ಗೋವು ಕಳ್ಳತನ, ಗೋವು ಸಾಗಾಟ, ಅಕ್ರಮ ಕಸಹಿಕಾನೆ ವಿರುದ್ಧ ಬ್ರಹತ್ ಪ್ರತಿಭಟನೆ ನಡೆಯಲಿದೆ ಎಂದು ಬಜರಂಗದಳದ ದಕ್ಷಿಣ ಪ್ರಾಂತ ಜಿಲ್ಲಾ ಸಹಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಹೇಳಿದರು. ಅವರು ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಜುಲೈ 3ರಂದು ಬೆಳಿಗ್ಗೆ 10ಗಂಟೆಯಿಂದ 12ಗಂಟೆಯವರೆಗೆ ಪುತ್ತೂರಿನ ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಸಂಘಟನೆಯ ಪ್ರಮುಖ ಮುಖಂಡರಿಂದ ಪ್ರತಿಭಟನಾ ಭಾಷಣವನ್ನು ಮಾಡಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಮುಖಂಡರಾದ ಡಾ.. ಕೃಷ್ಣಪ್ರಸನ್ನ, ಅಜಿತ್ ರೈ ಹೊಸಮನೆ, ಸಚಿನ್ ಪಾಪೆಮಜಲ್, ಸತೀಶ್ ಬಿ. ಎಸ್. ಶ್ರೀಧರ್ ತೆಂಕಿಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *