Header Ads
Header Ads
Breaking News

ವಿ4ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2 : ಉರ್ವ ಮೈದಾನದಲ್ಲಿ ಏಳನೇ ಹಂತದ ಕಾಮಿಡಿ ಪಂದ್ಯ

ಜನಮನ ಗೆದ್ದ ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2’ ಯಶಸ್ವಿಯಾಗಿ ತುಳುನಾಡಿನ ಜನರನ್ನು ನಕ್ಕುನಗಿಸುತ್ತಿದೆ. ಈವರೆಗಿನ ಪಂದ್ಯಗಳಲ್ಲಿ ಜನರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿದ ಸಿಪಿಎಲ್ ಸೀಸನ್ 2ನ ಏಳನೇ ಸುತ್ತಿನ ಪ್ರದರ್ಶನಾ ಪಂದ್ಯ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು. ತಂಡಗಳ ಭರ್ಜರಿ ಪರ್ಫಾರ್ಮೆನ್ಸ್‍ಗೆ ಪ್ರೇಕ್ಷಕರು ಫುಲ್ ಫಿದಾ ಆದರು.

ಕಾಮೆಡಿ ಪ್ರೀಮಿಯರ್ ಲೀಗ್. ಸುದ್ದಿ, ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮನೆಮಾತಾಗಿರುವ ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ. ಮೊದಲ ಆವೃತ್ತಿಯಲ್ಲಿ ಜನಮನ ರಂಜಿಸಿದ್ದ ಸಿಪಿಎಲ್ ಸೀಸನ್ 2ನಲ್ಲೂ ಜನರ ಮನಗೆದ್ದಿದೆ. ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಸೀಸನ್ 2ನಲ್ಲಿ ಈವರೆಗೆ ನಡೆದ ಆರೂ ಪಂದ್ಯಗಳಲ್ಲಿ ಜನರನ್ನು ನಕ್ಕುನಗಿಸಿರುವ ಕಾಮಿಡಿ ಪ್ರೀಮಿಯರ್ ಲೀಗ್‍ನ 7ನೇ ಸುತ್ತಿನ ಪ್ರದರ್ಶನಾ ಪಂದ್ಯವು ಮಂಗಳೂರಿನ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್‍ನ 67ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಉರ್ವ ಮೈದಾನದಲ್ಲಿ ನಡೆಯಿತು.

7ನೇ ಸುತ್ತಿನ ಪ್ರದರ್ಶನಾ ಪಂದ್ಯದಲ್ಲಿ ಮೊದಲ ಸ್ಪರ್ಧೆಯು ಮುನೀಶ್ ಕುಡ್ಲ ಕುಸಾಲ್ ಮತ್ತು ಫ್ಲಾಂಟ್ ತೃಪ್ತಿ ಕಲಾವಿದರ ನಡುವೆ ನಡೆಯಿತು. ದ್ವಿತೀಯ ಸ್ಪರ್ಧೆಯು ವಿನು ತೆಲಿಕೆದ ತೆನಾಲಿ ಮತ್ತು ಪ್ಲಾನೆಟ್ ಜಿ ವೈಷ್ಣವಿ ತಂಡಗಳ ನಡುವೆ ನಡೆಯಿತು. ಮೂರನೇ ಹಣಾಹಣಿಯು ಕುಂಬ್ಳೆ ಸೋಲಾರ್ ಜೈಮಾತಾ ಮತ್ತು ಬಿಯುಮೋಂಡ್ ರಾಜಶ್ರೀ ತಂಡಗಳ ನಡುವೆ ನಡೆಯಿತು. ಇದೇ ಸಂದರ್ಭದಲ್ಲಿ ಫೆ.22ರಂದು ತೆರೆಕಾಣಲಿರುವ ತುಳು ಚಲನಚಿತ್ರ ‘ಕಂಬಳಬೆಟ್ಟು ಭಟ್ರೆನ ಮಗಳ್’ ಚಿತ್ರತಂಡವು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿತು.

ಸಿಪಿಎಲ್ ಸೀಸನ್ 2ರ ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‍ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರಾಗಿ ಖ್ಯಾತ ಸ್ಯಾಂಡಲ್‍ವುಡ್, ಕೋಸ್ಟಲ್‍ವುಡ್ ನಟಿ ಸೋನಲ್ ಮೊಂತೇರೋ, ಖ್ಯಾತ ನಟ, ನಿರ್ದೇಶಕ ವಿಸ್ಮಯ ವಿನಾಯಕ್ ಅವರು ಆಗಮಿಸಿ ಪ್ರೋತ್ಸಾಹಿಸಿದರು. ಪ್ರದರ್ಶನ ನೀಡಿದ ತಂಡಗಳಿಗೆ 5 ಸಾವಿರ ರೂ. ಗೌರವಧನವನ್ನೊಳಗೊಂಡ ವಿ4 ನ್ಯೂಸ್ ಸೀಸನ್ ಅವಾರ್ಡ್, ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ವತಿಯಿಂದ ಮೂವೀ ಟಿಕೆಟ್ ಕೂಪನ್‍ಗಳನ್ನು ವಿತರಿಸಲಾಯಿತು. ಮುನೀಶ್ ಕುಡ್ಲ ಕುಸಲ್ ತಂಡದ ಮಾಲಕ ಮುನೀಶ್ ಸುವರ್ಣ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ವಿಠೋಬ ನುಳ್ಳಿಪ್ಪಾಡಿ, ಸನ್‍ಪ್ರೀಮಿಯಂ ರಿಫೈನ್ಡ್ ಸನ್‍ಫ್ಲವರ್ ಆಯಿಲ್‍ನ ಸೇಲ್ಸ್ ಮ್ಯಾನೇಜರ್ ದೀಪಕ್, ಫ್ಲಾಂಟ್ ತೃಪ್ತಿ ಕಲಾವಿದರು ತಂಡದ ಮಾಲಕ ಡಾ. ಸತೀಶ್ಚಂದ್ರ ಬಿ.ಕೆ. ಡಾ. ಬಿದ್ಯಾ ಸತೀಶ್ ಯುಎಫ್‍ಸಿಎ ಉಪಾಧ್ಯಕ್ಷ ಕಮಲಾಕ್ಷ ಕುಂದರ್, ಕೆಎಂಸಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ರಾಕೇಶ್, ಯುಎಫ್‍ಸಿಎ ಸದಸ್ಯ ಕೃಷ್ಣ ಕೆ., ರಾಯಲ್ ಗ್ರೂಂನ ಮಾಲಕ ವಿವೇಕ್, ಫ್ಯಾಷನ್ ಎಬಿಸಿಡಿಯ ಆಡಳಿತ ನಿರ್ದೇಶಕ ಚರಣ್, ಪ್ಲಾನೆಟ್ ಜಿ ವೈಷ್ಣವಿ ತಂಡದ ಮಾಲಕ ಗುರುದತ್ ಕಾಮತ್, ಯುಎಫ್‍ಸಿಎ ಸದಸ್ಯ ನೀಲೇಶ್ ಕುಂದರ್, ಬಿಯುಮೋಂಡ್ ರಾಜಶ್ರೀ ತಂಡದ ಮಾಲಕ ಡಾ. ಮಹೇಶ್ ಮಲ್ವಾದ್ಕರ್, ಯುಎಫ್‍ಸಿಎ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಕೋಟ್ಯಾನ್, ಜಯಂತ್ ಕುಮಾರ್, ವಿ4 ನ್ಯೂಸ್‍ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ, ವಿ4 ನ್ಯೂಸ್‍ನ ಕಾನೂನು ಸಲಹೆಗಾರ ಜೀವನ್ ಪ್ರಕಾಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಗಣ್ಯರಿಗೆ, ವಿಶೇಷ ತೀರ್ಪುಗಾರರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವಾ.ಓ 4: ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಸಹಭಾಗಿತ್ವದಲ್ಲಿ ಕಾಮೆಡಿ ಪ್ರೀಮಿಯರ್ ಲೀಗ್ ಸೀಸನ್ 2 ಮನರಂಜಿಸಲಿದೆ. ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆವರೇಜ್ ಪಾರ್ಟ್‍ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‍ಟೈನ್ಮೆಂಟ್ ಪಾರ್ಟ್‍ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‍ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋಟ್ರ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‍ಎಫ್‍ಎಂ, ಎಸ್‍ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2 ಜನಮನ ಗೆಲ್ಲುತ್ತಿದೆ.

Related posts

Leave a Reply

Your email address will not be published. Required fields are marked *