Header Ads
Header Ads
Breaking News

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿ4ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2 ಆರನೇ ಸುತ್ತಿನ ಪ್ರದರ್ಶನಾ ಪಂದ್ಯ

ಜನಮನ ಗೆದ್ದ ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2’ ಈಗಾಗಲೇ ಯಶಸ್ವಿಯಾಗಿ ತುಳುನಾಡಿನ ಜನರನ್ನು ನಕ್ಕುನಗಿಸುತ್ತಿದೆ. ದ್ವಿತೀಯ ಆವೃತ್ತಿಯ ಎಲ್ಲಾ ಪಂದ್ಯಗಳಲ್ಲಿ ಜನರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿದ ಸಿಪಿಎಲ್ ಸೀಸನ್ 2ನ ಆರನೇ ಸುತ್ತಿನ ಪ್ರದರ್ಶನಾ ಪಂದ್ಯ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು. ತಂಡಗಳ ಭರ್ಜರಿ ಪರ್ಫಾರ್ಮೆನ್ಸ್‍ಗೆ ಪ್ರೇಕ್ಷಕರು ಫುಲ್ ಫಿದಾ ಆದರು.ಕಾಮೆಡಿ ಪ್ರೀಮಿಯರ್ ಲೀಗ್. ಸುದ್ದಿ, ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮನೆಮಾತಾಗಿರುವ ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ. ಮೊದಲ ಆವೃತ್ತಿಯಲ್ಲಿ ಜನಮನ ರಂಜಿಸಿದ್ದ ಸಿಪಿಎಲ್ ಸೀಸನ್ 2ನಲ್ಲೂ ಜನರ ಮನಗೆದ್ದಿದೆ. ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಸೀಸನ್ 2ನಲ್ಲಿ ಈವರೆಗೆ ನಡೆದ ಐದೂ ಪಂದ್ಯಗಳಲ್ಲಿ ಜನರನ್ನು ನಕ್ಕುನಗಿಸಿರುವ ಕಾಮಿಡಿ ಪ್ರೀಮಿಯರ್ ಲೀಗ್‍ನ 6ನೇ ಸುತ್ತಿನ ಪ್ರದರ್ಶನಾ ಪಂದ್ಯವು ಶತಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.6ನೇ ಸುತ್ತಿನ ಪ್ರದರ್ಶನಾ ಪಂದ್ಯದಲ್ಲಿ ಮೊದಲ ಸ್ಪರ್ಧೆಯು ಗೋಹೀಲ್ ಸಾಕ್ಷಿ ಮತ್ತು ವಿಎನ್‍ಆರ್ ಗೋಲ್ಡ್ ಬಂಟ್ವಾಳ ತಂಡಗಳ ನಡುವೆ ನಡೆಯಿತು. ದ್ವಿತೀಯ ಸ್ಪರ್ಧೆಯು ಹೆವನ್ ರೋಸ್ ಪಾಪಿ ಮತ್ತು ಕಾರ್ ಡೆಕೋರ್ ಹರಿಣಿ ತಂಡಗಳ ನಡುವೆ ನಡೆಯಿತು. ಮೂರನೇ ಸುತ್ತಿನ ಸ್ಪರ್ಧೆಯು ಎಸ್ಸೆನ್ ವಿರ್ಗೋ ಫ್ರೆಂಡ್ಸ್ ಮತ್ತು ಯುಎಂ ವಿಷ್ಣು ತಂಡಗಳ ನಡುವೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಂಗಳೂರಿನ ಬೆಸೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಹಾಸ್ಯಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿತು. ಇದೇ ಸಂದರ್ಭದಲ್ಲಿ ಶೀಘ್ರದಲ್ಲೇ ತೆರೆಕಾಣಲಿರುವ ತುಳು ಚಲನಚಿತ್ರ ‘ಕಂಬಳಬೆಟ್ಟು ಭಟ್ರೆನ ಮಗಳ್’ ಚಿತ್ರತಂಡವು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿತು.

 ಸಿಪಿಎಲ್ ಸೀಸನ್ 2ರ ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‍ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರಾಗಿ ಖ್ಯಾತ ಹಿರಿಯ ರಂಗಕಲಾವಿದರಾದ ಸುಧೀರ್ ರಾಜ್ ಉರ್ವ, ಚೇತನ್ ರೈ ಮಾಣಿ ಮತ್ತು ನಟ, ನಿರ್ದೇಶಕ ಶೋಭರಾಜ್ ಪಾವೂರು ಅವರು ಭಾಗವಹಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಪ್ರದರ್ಶನ ನೀಡಿದ ತಂಡಗಳಿಗೆ 5 ಸಾವಿರ ರೂ. ಗೌರವಧನವನ್ನೊಳಗೊಂಡ ವಿ4 ನ್ಯೂಸ್ ಸೀಸನ್ ಅವಾರ್ಡ್, ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ವತಿಯಿಂದ ಮೂವೀ ಟಿಕೆಟ್ ಕೂಪನ್, ಶಾರದಾ ಆಯುರ್ವೇದ ಆಸ್ಪತ್ರೆ ವತಿಯಿಂದ ಆರೋಗ್ಯ ಕಾರ್ಡ್‍ನ್ನು ವಿತರಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಬಿ., ಬೆಸೆಂಟ್ ಮಹಿಳಾ ಕಾಲೇಜಿನ ಕರೆಸ್ಟಾಂಡೆಂಟ್ ದೇವಾನಂದ್ ಪೈ, ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ ಪಿ., ಸುಚಿತ್ರಾ-ಪ್ರಭಾತ್ ಚಿತ್ರಮಂದಿರದ ಸುಬ್ರಾಯ ಪೈ, ಸನ್‍ಪ್ರೀಮಿಯಂ ರಿಫೈನ್ಡ್ ಸನ್‍ಫ್ಲವರ್ ಆಯಿಲ್‍ನ ಸೇಲ್ಸ್ ಮ್ಯಾನೇಜರ್ ದೀಪಕ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಪ್ರೀತಾ, ಮೀರಾ, ರಮೇಶ್ ಪ್ರಭು, ವಿ4 ನ್ಯೂಸ್‍ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ, ವಿ4 ನ್ಯೂಸ್‍ನ ಕಾನೂನು ಸಲಹೆಗಾರ ಜೀವನ್ ಪ್ರಕಾಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಗಣ್ಯರಿಗೆ, ವಿಶೇಷ ತೀರ್ಪುಗಾರರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಸಹಭಾಗಿತ್ವದಲ್ಲಿ ಕಾಮೆಡಿ ಪ್ರೀಮಿಯರ್ ಲೀಗ್ ಸೀಸನ್ 2 ಮನರಂಜಿಸಲಿದೆ. ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆವರೇಜ್ ಪಾರ್ಟ್‍ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‍ಟೈನ್ಮೆಂಟ್ ಪಾರ್ಟ್‍ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‍ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋಟ್ರ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‍ಎಫ್‍ಎಂ, ಎಸ್‍ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2 ಜನಮನ ಗೆಲ್ಲುತ್ತಿದೆ.

 

Related posts

Leave a Reply