Header Ads
Header Ads
Breaking News

ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2 : ನಾಳೆ ನಡೆಯಲಿದೆ ದ್ವಿತೀಯ ಸುತ್ತಿನ ನಾಲ್ಕನೇ ಪ್ರದರ್ಶನಾ ಪಂದ್ಯ

 

ವಿ4 ನ್ಯೂಸ್‍ನ ಜನಮನ ಗೆದ್ದ, ಬಹುನಿರೀಕ್ಷಿತ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -2’ ಈಗಾಗಲೇ ಜನರನ್ನು ನಕ್ಕುನಗಿಸುತ್ತಿದೆ. ಈಗಾಗಲೇ ಮೊದಲ ಆವೃತ್ತಿಯಲ್ಲಿ ಭರ್ಜರಿ ರಸದೌತಣವನ್ನು ಒದಗಿಸಿರುವ ಕಾಮಿಡಿ ಪ್ರೀಮಿಯರ್ ಲೀಗ್ ದ್ವಿತೀಯ ಆವೃತ್ತಿಯ ನಾಲ್ಕನೇ ಸುತ್ತಿನ ಪ್ರದರ್ಶನಾ ಪಂದ್ಯ ನಾಳೆ ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ನಡೆಯಲಿದೆ. ಈ ಮೂಲಕ ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳಿಯ ಕಲಾವೈಭವ ಸೂರಜ್ ಕಲಾಸಿರಿಗೆ ಮೆರುಗು ತಂದುಕೊಡಲಿದೆ.

ಕಾಮೆಡಿ ಪ್ರೀಮಿಯರ್ ಲೀಗ್. ತನ್ನ ಸುದ್ದಿ, ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮನೆಮಾತಾಗಿರುವ ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ. ವಿ4  ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಸಿಪಿಎಲ್ ಸೀಸನ್ -2 ಈಗಾಗಲೇ ಜನಮನ ಸೂರೆಗೊಂಡಿದೆ. ದ್ವಿತೀಯ ಆವೃತ್ತಿಯ ನಾಲ್ಕನೇ ಪಂದ್ಯ ಮಂಗಳೂರು ಹೊರವಲಯದ ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಾಳೆ ಮಧ್ಯಾಹ್ನ ನಡೆಯಲಿದೆ. 6 ತಂಡಗಳ ಭರ್ಜರಿ ಪ್ರದರ್ಶನವು ಹಾಸ್ಯದ ರಸದೌತಣವನ್ನು ಉಣಬಡಿಸಲಿದೆ.

ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಸಹಭಾಗಿತ್ವದಲ್ಲಿ ಕಾಮೆಡಿ ಪ್ರೀಮಿಯರ್ ಲೀಗ್ ಸೀಸನ್ 2 ಮನರಂಜಿಸಲಿದೆ. ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆವರೇಜ್ ಪಾರ್ಟ್‍ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‍ಟೈನ್ಮೆಂಟ್ ಪಾರ್ಟ್‍ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‍ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋಟ್ರ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‍ಎಫ್‍ಎಂ, ಎಸ್‍ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2 ಜನಮನ ಗೆಲ್ಲುತ್ತಿದೆ.

Related posts

Leave a Reply