Header Ads
Breaking News

ವಿ4 ಸ್ಟ್ರೀಮ್‍ನಲ್ಲಿ ಮೂಡಿಬರಲಿದೆ ‘ಗೆಸ್ಟ್‍ಹೌಸ್’ ವೆಬ್‍ಸಿರೀಸ್: ಭರದಿಂದ ಸಾಗುತ್ತಿದೆ ಶೂಟಿಂಗ್ ಕಾರ್ಯ

ವಿ4 ಸ್ಟ್ರೀಮ್. ವಿ4 ನ್ಯೂಸ್ ಮೂಲಕ ಮೂಡಿಬಂದಿರೋ ಒಟಿಟಿ ಫ್ಲ್ಯಾಟ್‍ಫಾರಂ. ವೆರೈಟಿ ವೆರೈಟಿ ಎಂಟರ್‍ಟೈನ್‍ಮೆಂಟ್ ಪ್ರೋಗ್ರಾಂಗಳು ವಿ4 ಸ್ಟ್ರೀಮ್‍ನಲ್ಲಿ ಮೂಡಿಬರಲು ಸಜ್ಜಾಗಿ ನಿಂತಿವೆ. ಸಾಲು ಸಾಲು ಕಾರ್ಯಕ್ರಮಗಳು ಈ ಮೂಲಕ ಮೂಡಿಬರಲಿದ್ದು, ಇದೀಗ ಮತ್ತೊಂದು ವೆಬ್‍ಸಿರೀಸ್ ಈ ಸಾಲಿನಲ್ಲಿದೆ. ಅದು ‘ಗೆಸ್ಟ್ ಹೌಸ್’. ಸೋ ಏನಿದರ ಕಥೆ? ಎಲ್ಲಿ ಶೂಟಿಂಗ್ ನಡೀತಾ ಇದೆ? ಡೀಟೇಲ್ಸ್ ಬರ್ತಾ ಇದೆ ನೋಡಿ.

ಫ್ರೆಂಡ್ಸ್ ಮಂಗಳೂರು. ಈಗಾಗಲೇ ವಿ4 ನ್ಯೂಸ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನಲ್ಲಿ ಸಮಸ್ತ ತುಳುವರನ್ನು ನಕ್ಕು ನಗಿಸುತ್ತಿರುವ ತಂಡ. ಈ ಫ್ರೆಂಡ್ಸ್ ಮಂಗಳೂರು ತಂಡ ಇದೀಗ ಮತ್ತೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ಮುಂದಾಗಿದೆ. ಅದುವೇ ವೆಬ್‍ಸಿರೀಸ್‍ನ ನಿರ್ಮಾಣ.
ಫ್ರೆಂಡ್ಸ್ ಮಂಗಳೂರು ಟೀಂ ಹಾಗೂ ರಿವ್ಯೂ ಕ್ರಿಯೇಶನ್ಸ್‍ನ ಜಂಟಿ ಸಹಯೋಗದಲ್ಲಿ ‘ಗೆಸ್ಟ್ ಹೌಸ್’ ಎನ್ನುವ ವೆಬ್‍ಸಿರೀಸ್ ನಿರ್ಮಾಣಗೊಳ್ತಾ ಇದೆ. ವಿ4 ನ್ಯೂಸ್‍ನ ಒಟಿಟಿ ಪ್ಲಾಟ್‍ಫಾರಂ ವಿ4 ಸ್ಟ್ರೀಮ್ ಮೂಲಕ ಮೂಡಿಬರಲಿದ್ದು, ಶೂಟಿಂಗ್ ಪ್ರೊಸೆಸ್ ಭರದಿಂದ ಸಾಗುತ್ತಿದೆ.

‘ಗೆಸ್ಟ್‍ಹೌಸ್’. ಇದು ಫ್ರೆಂಡ್ಸ್ ಮಂಗಳೂರು ತಂಡದ ಪ್ರತಿಯೊಬ್ಬ ಸದಸ್ಯರು ಸೇರಿ ರಚಿಸಿದ ಕಥೆ ಇದಾಗಿದೆ ಅನ್ನೋದು ಮತ್ತೊಂದು ವಿಶೇಷ. ತನ್ನ ಡಿಫರೆಂಟ್ ಮ್ಯಾನರಿಸಂ ಮೂಲಕ ಮನಗೆದ್ದಿರುವ ಕಲಾವಿದ ಪ್ರವೀಣ್ ಕೊಡಕ್ಕಲ್ ನಿರ್ದೇಶನದಲ್ಲಿ ಈ ವೆಬ್‍ಸಿರೀಸ್ ಮೂಡಿ ಬರ್ತಾ ಇದೆ. ಇನ್ನು ಮೈ ನೇಮ್ ಈಸ್ ಅಣ್ಣಪ್ಪ ತುಳು ಚಿತ್ರದ ಛಾಯಾಗ್ರಾಹಕರಾದ ಮಯೂರ್ ಆರ್ ಶೆಟ್ಟಿ ಕ್ಯಾಮಾರದಲ್ಲಿ ಸಹಕರಿಸಿದ್ದಾರೆ, ಈ ಸಿರೀಸ್‍ನಲ್ಲಿ ಖ್ಯಾತ ಕಲಾವಿದರಾದ ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಜಗದೀಶ್ ಅಡ್ಯಾರ್, ರವೀಶ್ ಬಲ್ಮಠ, ತಾರನಾಥ್ ಕುಳಾಯಿ, ಪಿಂಕಿರಾಣಿ ಅಶ್ವತ್ಥ್ ಶೆಟ್ಟಿ, ಆಸ್ಕರ್ ಫೆರ್ನಾಂಡೀಸ್, ಸಮೃದ್ಧಿ ಕಲಾವಿದರು ಕುಡ್ಲದ ಮಾಲಕರಾದ ಮುಖೇಶ್ ಶೆಟ್ಟಿ ಆಕಾಶ ಭವನ ಮುಂತಾದ ಕಲಾವಿದರು ನಟಿಸಿದ್ದಾರೆ.

ಇದೀಗ ಮಂಗಳೂರಿನ ಅಡ್ಯಾರ್‍ನಲ್ಲಿ ಈ ವೆಬ್‍ಸಿರೀಸ್‍ನ ಶೂಟಿಂಗ್ ನಡೀತಾ ಇದೆ. ಇದಕ್ಕೆ ಉಮಾವತಿ ಶೆಟ್ಟಿ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಮಹಾಲಿಂಗೇಶ್ವರ ದಯಾ ಫ್ರೆಂಡ್ಸ್ ಸರ್ಕಲ್ ಅಡ್ಯಾರ್‍ನ ಅಧ್ಯಕ್ಷರು, ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಫ್ರೆಂಡ್ಸ್ ಕಲಾವಿದರು ಮಂಗಳೂರು ಹಾಗೂ ರಿವ್ಯೂ ಕ್ರಿಯೇಷನ್ ಜಂಟಿಯಾಶ್ರಯದಲ್ಲಿ ಮೂಡಿ ಬರ್ತಾ ಇರೋ ಗೆಸ್ಟ್ ಹೌಸ್ ವೆಬ್ ಸಿರೀಸ್ ನಿಮ್ಮನ್ನು ಎಂಟರ್ ಟೇನ್ ಮಾಡೋದ್ರಲ್ಲಿ ಯಾವುದೇ ಸಂಶಯವಿಲ್ಲ. ಆದಷ್ಟು ಶೀಘ್ರ ಈ ವೆಬ್‍ಸಿರೀಸ್ ವಿ4 ಸ್ಟ್ರೀಮ್‍ನಲ್ಲಿ ಮೂಡಿಬರಲಿದೆ.

Related posts

Leave a Reply

Your email address will not be published. Required fields are marked *