Header Ads
Header Ads
Breaking News

ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವರಿಂದ ದ.ಕ. ಜಿಲ್ಲೆಯಲ್ಲಿ ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ

ಕೇಂದ್ರ ಸರಕಾರದ ಭಾರತ್ ಮಾಲ ಯೋಜನೆಯ ಮೂಲಕ ಅನುಮೋದನೆಗೊಂಡ ವಿವಿಧ ರಸ್ತೆ ಕಾಮಗಾರಿ ಹಾಗೂ ಕೇಂದ್ರ ಸರಕಾರದ ಸಾಗರ ಮಾಲ ಯೋಜನೆಯ ಮೂಲಕ ಕೂಳೂರು ಮೀನುಗಾರಿಕಾ ಜಟ್ಟಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಶಿಲಾನ್ಯಾಸ ಕಾರ್ಯಕ್ರಮ ಮಂಗಳೂರಿನ ಎನ್‌ಎಂಪಿಟಿಯ ಸೆಂಟಿನರಿ ಹಾಲ್‌ನಲ್ಲಿ ಜರುಗಿತು.ಎನ್‌ಎಂಪಿಟಿ ಸಭಾಂಗಣದಲ್ಲಿ ಜರುಗಿದ ಶಿಲಾನ್ಯಾಸ ಕಾರ್ಯಕ್ರಮವನ್ನು ಸಚಿವ ಯು.ಟಿ. ಖಾದರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ಧು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಆನಂತರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಕರಾವಳಿ ಭಾಗದ ಮೀನುಗಾರರಿಗೆ ಸಂತೋಷದ ವಿಚಾರ. ನೂತನ ಮೀನುಗಾರಿಕಾ ಜೆಟ್ಟಿಯನ್ನು ನಿರ್ಮಿಸಲಾಗಿದ್ದು, ೩೫೦ ಮೀನುಗಾರಿಕಾ ದೋಣಿಗಳು ನಿಲುಗಡೆಯಾಗಲು ಅವಕಾಶವಿದೆ ಇದೆ ಎಂದು ಹೇಳಿದರು.

ಸಾಗರ ಮಾಲ ಯೋಜನೆಯ ಮೂಲಕ ನಿರ್ಮಾಣಗೊಳ್ಳುವ ಈ ಮೀನುಗಾರಿಕಾ ಜಟ್ಟಿಗೆ196.5 ಕೋಟಿ ರೂ ಬಿಡುಗಡೆಯಾಗಿದೆ. ಈ ಕಾಮಗಾರಿಗೆ ಶೇ೫೦ ಕೇಂದ್ರ ಸರಕಾರ, ಶೇ 45 ಎನ್‌ಎಂಪಿಟಿ ಹಾಗೂ ಶೇ 5 ರಾಜ್ಯ ಸರಕಾರ ಅನುದಾನ ನೀಡಲಿದೆ ಈ ಸಮಾರಂಭದಲ್ಲಿ ಬಿಕರ್ನಕಟ್ಟೆಯಿಂದ ಕಾರ್ಕಳದ ಸಾಣೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 169ರಲ್ಲಿ 45.1 ಕಿ.ಮೀ ದೂರದ ಚಸುಷ್ಪಥ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಶಾಸಕ ಭರತ್ ಶೆಟ್ಟಿ, ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪುರ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *