Header Ads
Header Ads
Breaking News

ವೀರಪ್ಪನ್ ಕಾರ್ಯಾಚರಣೆ ಮತ್ತು ಗೂಢಚರ್ಯೆ ಎಂಬ ವಿಷಯದ ಕುರಿತು ಉಪನ್ಯಾಸ

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವೀರಪ್ಪನ್ ಕಾರ್ಯಾಚರಣೆ ಮತ್ತು ಗೂಢಚರ್ಯೆ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಜದ ನಿವೃತ್ತ ಡಿಜಿಪಿ, ಕರ್ನಾಟಕ ಗುಪ್ತಚರದಳದ ಮಾಜಿ ಮುಖ್ಯಸ್ಥ ಡಾ|ಡಿ.ವಿ.ಗುರುಪ್ರಸಾದ್ ಮಾತನಾಡಿ, ಪೊಲೀಸ್ ಗುಪ್ತಚರ ವಿಭಾಗವನ್ನು ಕೇಂದ್ರಗುಪ್ತಚರ ವಿಭಾಗದ ಮಾದರಿಯಲ್ಲಿ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೆ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸಲಾಗುವುದು ಅಂತಾ ಹೇಳಿದ್ರು.

ಇನ್ನು ಮಾಹಿತಿಯನ್ನ ಪೊಲೀಸರೂ, ಪತ್ರಕರ್ತರೂ ಸಂಗ್ರಹಿಸುತ್ತಾರೆ, ಅದ್ರೆ ವ್ಯತ್ಯಾಸ ಇರುತ್ತದೆ, ಗುಪ್ತಚರ ವ್ಯವಸ್ಥೆಯ ಮುಖ್ಯಸ್ಥರಿಗೆ ಮುಂದೇನಾಗಬಹುದು ಎನ್ನುವ ಕಲ್ಪನೆ ಇರಬೇಕು. ಮಾಹಿತಿಯನ್ನ ಕಲೆ ಹಾಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂದರು.ಇನ್ನು ವೀರಪ್ಪನ್ ಕಾರ್ಯಾಚರಣೆಯನ್ನು ಮೆಲುಕು ಹಾಕಿದ ಡಾ|ಗುರುಪ್ರಸಾದ್ ಅವರು, ಆತ ಬಹಳ ತೀಕ್ಷ್ಣಮತಿಯಾಗಿದ್ದ, ಉತ್ತಮ ಗುಪ್ತಚರ ಮಾಹಿತಿ ಸಂಗ್ರಹ ಕಲೆ ಆತನಲ್ಲಿತ್ತು. ಇದೇ ಕಾರಣದಿಂದ ಆತ ಹಲವು ಬಾರಿ ತಪ್ಪಿಸಿಕೊಂಡಿದ್ದ ಎಂದರು. ಈ ವೇಳೆ ಪೊಲೀಸ್ ಆಯುಕ್ತ ಡಾ|ಹರ್ಷ ಪಿ.ಎಸ್, ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀಪ್ರಸಾದ್ ಈ ವೇಳೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *