Header Ads
Header Ads
Breaking News

ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವಧಂತ್ಯುತ್ಸವ ಕಾರ್ಯಕ್ರಮ : ಹೆಗ್ಗಡೆಯವರನ್ನು ಮೆರವಣಿಗೆ ಮೂಲಕ ಸಭಾಭವನಕ್ಕೆ ಆಹ್ವಾನ

ಧರ್ಮಸ್ಥಳ ಧರ್ಮಾಧಿಕಾರಿಯವರ ಡಾ.ಡಿ. ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವಧಂತುತ್ಸವ ಕಾರ್ಯಕ್ರಮ ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಹಸಚಿವರಾದ ಬಸವರಾಜ್ ಬೊಮ್ಮಾಯಿಯವರು ಪೂಜ್ಯ ಹೆಗ್ಗಡೆಯವರ ಸಮಾಜ ಸೇವೆ ಇಡೀ ವಿಶ್ವವೇ ಗುರುತಿಸಿದೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಹಲವಾರು ಹಳ್ಳಿಯ ಬಡವರ ಬದುಕು ಬೆಳಕಾಗಿದೆ ಎಂದರು. ಕಾರ್ಯಕ್ರಮದ ಮೊದಲು ಪೂಜ್ಯ ಹೆಗ್ಗಡೆಯವರನ್ನು ಮೆರವಣಿಗೆ ಮೂಲಕ ಸಭಾ ಭವನಕ್ಕೆ ಆಹ್ವಾನಿಸಲಾಯಿತು, ಕಾರ್ಯಕ್ರಮದಲ್ಲಿ ವಿಧಾನ ಸಭೆಯ ಸದಸ್ಯರಾದ ಹರೀಶ್ ಕುಮಾರ್, ಶಾಸಕರಾದ ಹರೀಶ್ ಪೂಂಜಾ, ಮಾಣಿಲದ ಮೋಹನ್ ದಾಸ್ ಸ್ವಾಮೀಜಿ, ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಹೇಮಾವತಿ ವಿ ಹೆಗ್ಗಡೆ, ಹಾಗೂ ಇನ್ನಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *