Header Ads
Header Ads
Header Ads
Breaking News

ವೃದ್ಧಾಶ್ರಮ, ಅನಾಥಾಲಯಗಳಿಗೆ ಬಿರಿಯಾನಿ ವಿತರಣೆ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ವಿನೂತನ ಕಾರ್ಯಕ್ರಮ ಸೋಮೇಶ್ವರ ನೆಹರುನಗರದಲ್ಲಿರುವ ಪಶ್ಚಿಮ್ ರಿಹ್ಯಾಬ್ ಸೆಂಟರಿನಲ್ಲಿ ವಿತರಣೆ

 

ವೃದ್ಧಾಶ್ರಮ, ಅನಾಥಾಲಯಗಳಿಗೆ ಅನುಕೂಲವಾಗುವಂತೆ ಸರಕಾರ ದಾಸೋಹ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಮೂಲಕ ಉಚಿತ ಅಕ್ಕಿಯನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಸೋಮೇಶ್ವರ ನೆಹರು ನಗರದಲ್ಲಿರುವ ಪಶ್ಚಿಮ್ ರಿಹ್ಯಾಬ್ ಸೆಂಟರಿನಲ್ಲಿ ಉಳಿದುಕೊಂಡಿರುವ ಅನಾಥ ವೃದ್ಧರ ಜತೆಗೆ ನಡೆದ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ , ಬಿರಿಯಾನಿ ವಿತರಿಸಿ ಮಾತನಾಡಿದರು. ಅನಾಥರ ಬಾಳಿಗೆ ಬೆಳಕಾಗಿರುವ ಆಶ್ರಮಗಳಿಗೆ ಮತ್ತು ಉಚಿತ ವಸತಿ ಹಾಗೂ ಊಟ ಕಲ್ಪಿಸುವವರಿಗೆ ಅನುಕೂಲವಾಗುವ ರೀತಿಯಲ್ಲಿ ದಾಸೋಹ ಕಾರ್ಯಕ್ರಮ ಜಾರಿಗೆ ತರಲಾಗಿದೆ ,ಕಷ್ಟಗಳನ್ನು ಹಂಚಿಕೊಂಡು ನೆಮ್ಮದಿಯ ವಾತಾವರಣ ಕಲ್ಪಿಸಿರುವ ಸೆಂಟರಿನ ಕಾರ್‍ಯವೈಖರಿ ಶ್ಲಾಘನೀಯ ಎಂದರು. ಈ ಸಂದಭದಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್, ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಕೊಣಾಜೆ ಠಾಣಾಧಿಕಾರಿ ಶರೀಫ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply