

ಗೊತ್ತಿಲ್ಲದ ಊರು, ಗೊತ್ತಿಲ್ಲದ ಭಾಷೆ, ಆದರೂ ಕುಡ್ಲದ ಕುವರನೋರ್ವ ದೂರದ ತಮಿಳುನಾಡಿನಲ್ಲಿ ಬೈಕ್ನಲ್ಲಿ ಬಸ್ ಚೇಸ್ಮಾಡಿ ವೃದ್ಧೆಯೋರ್ವರು ಕಳೆದುಕೊಂಡಿರುವ ಔಷಧಿ ಬಾಟಲಿಯನ್ನು ತಲುಪಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಬಂಟ್ವಾಳದ ಫರಂಗಿಪೇಟೆಯವರಾದ ಅರುಣ್ ಕುಮಾರ್ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ವೀಕೆಂಡ್ನಲ್ಲಿ ಬೈಕ್ನಲ್ಲಿ ಸುತ್ತಾಟ ಮಾಡುವ ಪ್ರವೃತ್ತಿ ಉಳ್ಳ ಅವರು ಇತ್ತೀಚೆಗೆ ಏಕಾಂಗಿಯಾಗಿ ತಮಿಳುನಾಡಿಗೆ ಬೈಕ್ನಲ್ಲಿ ಪ್ರಯಾಣ ಬೆಳೆಸಿದ್ದರು. ಹೀಗೆ ಹೋದವರು ಭಾರತದ ದಕ್ಷಿಣದ ಕಟ್ಟಕಡೆಯ ಧನು?ಟಿಗೆ ಹೋಗಿದ್ದಾರೆ. ಅಲ್ಲಿಂದ ಹಿಂದಿರುಗಿ ತೆಂಕಾಸಿ ಎಂಬ ಊರಿಗೆ ಪ್ರಯಾಣ ಬೆಳೆಸುವಾಗ ಈ ಘಟನೆ ನಡೆದಿದೆ. ಈ ಚಿತ್ರಣದ ವೀಡಿಯೊವನ್ನು ಅರುಣ್ ಕುಮಾರ್ ಮೂಲ್ಯ ಅವರು ತಮ್ಮ ಯೂಟ್ಯೂಬ್ ಚ್ಯಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವೀಡಿಯೋವನ್ನು ಕೇವಲ ಒಂದು ವಾರದಲ್ಲಿ 14 ಲಕ್ಷ ಜನರು ವೀಕ್ಷಿಸಿದ್ದಾರೆ. ಅಲ್ಲದೆ, 29 ಸಾವಿರ ಜನರು ಈ ವೀಡಿಯೊವನ್ನು ಮೆಚ್ಚಿ ಲೈಕ್ ಮಾಡಿದ್ದು, 2 ಸಾವಿರ ಜನರು ಕಮೆಂಟ್ಸ್ ಮಾಡಿದ್ದಾರೆ.