Header Ads
Header Ads
Breaking News

ವೆಚ್ಚ ಉಳಿಸಲು ಬ್ಯಾಂಕುಗಳ ಕ್ರಮ, ಐದು ಬ್ಯಾಂಕುಗಳ ಒಕ್ಕೂಟ ರಚನೆ

ಬಾಕಿ ಸಂಗ್ರಹ ಮತ್ತು ಪಿಂಚಣಿ, ವಿಮೆ ಮತ್ತು ಹಣ ಪಾವತಿ ಉದ್ದೇಶಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ಐದು ಬ್ಯಾಂಕ್ಗಳ ಒಪ್ಪಂದ ಮಾಡಿಕೊಂಡಿದೆ.
ಭವಿಷ್ಯ ನಿಧಿ ಸಂಘಟನೆಯ ಸದಸ್ಯರಿಗೆ ತ್ವರಿತವಾಗಿ ಹಣ ಪಾವತಿಸಲು ಮತ್ತು ಹಣ ಹೂಡಿಕೆ ಪ್ರಕ್ರಿಯೆಗೆ ವೇಗ ನೀಡಲು ಈ ಒಪ್ಪಂದ ನೆರವಾಗಲಿದೆ. ಬ್ಯಾಂಕ್ ಆಫ್ ಬರೋಡಾ, ಐಸಿ‌ಐಸಿ‌ಐ ಬ್ಯಾಂಕ್, ಎಚ್ಡಿ‌ಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ?ಬ್ಯಾಂಕ್ ಜತೆಗಿನ ಈ ಒಪ್ಪಂದದ ಫಲವಾಗಿ ಸಂಘಟನೆಗೆ ವರ್ಷಕ್ಕೆ ರೂ. ೧೨೫ ಕೋಟಿ ಉಳಿತಾಯ ಆಗಲಿದೆ. ಈ ಬ್ಯಾಂಕ್ಗಳ ಗ್ರಾಹಕರು ತಮ್ಮ ಪಿ‌ಎಫ್ ಬಾಕಿ ಹಣವನ್ನು ಇಪಿ‌ಎಫ್‌ಒದ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ನೇರವಾಗಿ ಪಾವತಿಸಬಹುದಾಗಿದೆ.
ವಿವಿಧ ಬ್ಯಾಂಕ್ಗಳಲ್ಲಿ ಇರುವ ಸದಸ್ಯರ ಖಾತೆಗಳಿಗೆ ಹಣ ಪಾವತಿಸಲು ವರ್ಷಕ್ಕೆ ರೂ.?೩೫೦ ಕೋಟಿಗಳಷ್ಟು ವಹಿವಾಟು ಶುಲ್ಕ ವೆಚ್ಚವಾಗುತ್ತಿತ್ತು. ಎಸ್ಬಿ‌ಐ ಜತೆಗೆ, ಪಿ‌ಎನ್ಬಿ, ಅಲಹಾಬಾದ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಆನ್ಲೈನ್ನಲ್ಲಿ ಬಾಕಿ ಸಂಗ್ರಹಕ್ಕೆ ಚಾಲನೆ ನೀಡಿದನಂತರ ವಹಿವಾಟು ಶುಲ್ಕವು ರೂ. ೧೭೫ಕ್ಕೆ ಇಳಿದಿತ್ತು. ಹೊಸದಾಗಿ ಐದು ಬ್ಯಾಂಕ್ಗಳ ಜತೆಗಿನ ಇಂದಿನ ಒಪ್ಪಂದದ ಫಲವಾಗಿ ಈ ವೆಚ್ಚವು ವರ್ಷಕ್ಕೆ ರೂ. ೫೦ ಕೋಟಿಗೆ ಇಳಿಯಲಿದೆ ಎಂದು ಕೇಂದ್ರೀಯ ಭವಿಷ್ಯ ನಿಧಿ ಕಮಿಷನರ್ ವಿ. ಪಿ. ಜಾಯ್ ತಿಳಿಸಿದ್ದಾರೆ.

Related posts

Leave a Reply