Header Ads
Header Ads
Breaking News

ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ಉಪಹಾರ ಕಾರುಣ್ಯ ಯೋಜನೆ

ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ನೀಡಲಾಗುತ್ತಿರುವ ರಾತ್ರಿಯ ಉಪಹಾರದ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನವಂಬರ್ ತಿಂಗಳು ಪೂರ್ತಿ ಪ್ರಾಯೋಜಕತ್ವ ನೀಡಿದ್ದು, ಕನ್ನಡ ರಾಜ್ಯೋತ್ಸವದಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಸಮಾಜದಲ್ಲಿ ಎಲ್ಲರೂ ಸುಖ ಶಾಂತಿ ಸಮೃದ್ಧಿಯಿಂದಿರಬೇಕು. ಯಾರೂ ಹಸಿವಿನಲ್ಲಿರಬಾರದು. ಸರ್ವ ಧರ್ಮದ ಬಂಧುಗಳು ಸಹಬಾಳ್ವೆಯಿಂದ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಿ.ಎಂ.ಓ. ಡಾ. ರಾಜೇಶ್ವರಿ ದೇವಿ ಮಾತನಾಡಿ ಹಸಿದವರಿಗೆ ಅನ್ನ ನೀಡುವ ಪುಣ್ಯ ಕಾರ್ಯವು ಶ್ಲಾಘನೀಯ. ಜಾಗತಿಕ ಬಂಟರ ಸಂಘ ಎಂ.ಫ್ರೆಂಡ್ಸ್ ಜೊತೆ ಕೈಜೋಡಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಕಾರುಣ್ಯ ಪ್ರಾಯೋಜಕತ್ವದ ಚೆಕ್ ನ್ನು ಐಕಳ ಹರೀಶ್ ಶೆಟ್ಟಿ ಅವರು ಎಂ.ಫ್ರೆಂಡ್ಸ್ ಗೆ ಹಸ್ತಾಂತರಿಸಿದರು. ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಎಂ.ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ರೋಗಿಗಳ ಜತೆಗಾರರಿಗೆ ಆಹಾರ ಬಡಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ, ಮೈಸೂರು ಬಂಟ್ಸ್ ಸಂಘದ ರವಿಚಂದ್ರ ಶೆಟ್ಟಿ, ಜಾಗತಿಕ ಬಂಟರ ಸಂಘದ ಸದಸ್ಯರಾದ ಹೇಮಂತ್ ಶೆಟ್ಟಿ ಮಂಗಳೂರು ಹಾಗೂ ಸುರೇಶ್ ಶೆಟ್ಟಿ ಸೂರಿಂಜೆ, ಎಂ.ಫ್ರೆಂಡ್ಸ್ ಉಪಾಧ್ಯಕ್ಷ ಸುಜಾಹ್ ಮಹಮ್ಮದ್, ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಟ್ರಸ್ಟಿಗಳಾದ ಹಮೀದ್ ಅತ್ತೂರು, ಮಹಮ್ಮದ್ ಟಿ.ಕೆ., ಪುತ್ತಾಕ ಉಪ್ಪಿನಂಗಡಿ, ಅಬ್ಬಾಸ್ ಕಲ್ಲಂಗಳ, ಎಡ್ವಕೇಟ್ ಶೇಖ್ ಇಸಾಕ್, ನಾಸಿರ್ ಲೊರೆಟ್ಟೊಪದವು ಮೊದಲಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *