Header Ads
Header Ads
Breaking News

ವೆಲ್ಫೇರ್ ಅಸೋಸಿಯೇಶನ್‌ನ ೧೯ನೇ ವಾರ್ಷಿಕೋತ್ಸವ ಹಿನ್ನೆಲೆ ಕಿನ್ಯಾ ಖುತುಬಿನಗರ ಸಮೀಪದಲ್ಲಿ ಉದ್ಘಾಟನೆ

 

 ಶೈಖಾ ಮರ್ಕಝ್ ಯೂತ್ ವೆಲ್ಫೇರ್ ಅಸೋಸಿಯೇಶನ್‌ನ 19ನೇ ವಾರ್ಷಿಕೊತ್ಸವ ನೆನಪಿಗೆ ಅಬ್ಬು ಹಾಜಿ ಕೊಡುಗೆಯಾಗಿ ನಿರ್ಮಿಸಿಕೊಟ್ಟ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಕಿನ್ಯಾದ ಖುತುಬಿನಗರ ಸಮೀಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು.
ನಂತರ ಮಾತನಾಡಿ, ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯೆವಸ್ಥೆಗಳು ಇದ್ದು, ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಲೌಕಿಕ ವಿದ್ಯಾಭ್ಯಾಸದ ಜೋತೆ ಧಾರ್ಮಿಕ ವಿದ್ಯೆಗೆ ಹೆತ್ತವರು ಮಹತ್ವ ನೀಡಿದಾಗ ಮಾತ್ರ ಇಸ್ಲಾಂ ಧರ್ಮ ಅಂತ್ಯದಿನದ ವರೆಗೆ ನೆಲೆನಿಲ್ಲು ಸಾಧ್ಯ ಎಂದು ಹೇಳಿದರು. 
ಈ ಸಂದರ್ಭ ಕಟ್ಟಡ ನಿರ್ಮಿಸಿಕೊಟ್ಟ ಅಬ್ಬು ಹಾಜಿಯವರನ್ನು ಸನ್ಮಾನಿಸಲಾಯಿತು. ಅಸೋಸಿಯೇಶನ್ ಅಧ್ಯಕ್ಷ ಕೆ.ಎ ಅಬೂಬಕ್ಕರ್, ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಕೆ.ಸಿ ನಗರ ಜುಮಾ ಮಸೀದಿ ಖತೀಬ್ ಹನೀಫ್ ಸಖಾಫಿ, ಮತ್ತಿತರು ಉಪಸ್ಥತಿದರು.