Header Ads
Header Ads
Header Ads
Breaking News

ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ಬಂಟ್ವಾಳದಲ್ಲಿ ಅಂಗನವಾಡಿ ನೌಕರರಿಂದ ಧರಣಿ

ಬಂಟ್ವಾಳ: ವೇತನ ಪಾವತಿಗೆ ಆಗ್ರಹಿಸಿ ಬಂಟ್ವಾಳ ತಾಲೂಕು ಅಂಗನವಾಡಿ ನೌಕರರ ಧರಣಿ ಸತ್ಯಾಗ್ರಹ ಬಿ.ಸಿ.ರೋಡಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಯವರ ಕಚೇರಿ ಮುಂಭಾಗ ನಡೆಯಿತು. ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾಋರು ಆರಂಭದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆಯ ಮುಂಭಾಗ ಧರಣಿ ಕುಳಿತರು. ಮಾತೃಪೂರ್ಣ ಯೋಜನೆಯ ಅನುಷ್ಠಾನ ಕ್ರಮಗಳನ್ನು ಮಾರ್ಪಾಡುಗೊಳಿಸಬೇಕು, ಇದಕ್ಕಾಗಿ ಜಂಟಿ ಬ್ಯಾಂಕ್ ಖಾತೆ ತೆರೆಯಲು ಒತ್ತಡ ಹಾಕಬಾರದು, ಪ್ಲಾಸ್ಟಿಕ್ ಕಸ ವಸ್ತುಗಳ ಸಂಗ್ರಹ ಮತ್ತು ವಿಲೇವಾರಿ ಕೆಲಸಗಳಿಂದ ಮುಕ್ತಿ ನೀಡಬೇಕು, ಆರೋಗ್ಯ ವಿಮೆ ಶೀಘ್ರ ಜಾರಿಗೊಳಿಸಬೇಕು, ಮಾರುಕಟ್ಟೆ ದರದಂತೆ ಮೊಟ್ಟೆ, ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳ ಖರೀದಿಗೆ ಹಣಕಾಸು ಒದಗಿಸಬೇಕು,

ಇಲ್ಲವೇ ಇಲಾಖೆಯೇ ನೇರವಾಗಿ ಇದನ್ನು ಪೂರೈಸಬೇಕು, ಇಲಾಖೇತರ ಕೆಲಸಗಳನ್ನು ನೀಡಬಾರದು ಮೊದಲಾದ ಹಲವು ಬೇಡಿಕೆಗಳನ್ನು ಈ ಸಂಧರ್ಭದಲ್ಲಿ ಮುಂದಿಡಲಾಯಿತು. ಸಂಘದ ಅಧ್ಯಕ್ಷೆ ಉಮಾವತಿ ಬಾಳ್ತಿಲ ಪ್ರತಿಭಟನಕಾರರ ಬೇಡಿಕೆಯನ್ನು ಇಲಾಕಾಧಿಕಾರಿಗಳ ಮುಂದಿಟ್ಟರು. ಸ್ಥಳಕ್ಕೆ ಪ್ರಭಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಾಯತ್ರಿ ಕಂಬಳಿ ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರ ಪರಿಹರಿಸುವ ಭರವಸೆ ನೀಡಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply