Header Ads
Breaking News

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ : ಪುತ್ತೂರಿನಲ್ಲಿ ವೈದ್ಯರ ಸಂಘದಿಂದ ಪ್ರತಿಭಟನೆ

ಪುತ್ತೂರು: ವೈದ್ಯರಿಗೆ ಇರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ, ವೈದ್ಯರ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆ ನಡೆಸಬಾರದಾಗಿ ಹಾಗೂ ವೈದ್ಯರಿಗೆ ಕಾನೂನಿನ ಮುಖಾಂತರ ರಕ್ಷಣೆಯನ್ನು ನೀಡಬೇಕು ಎಂಬ ಉದ್ದೇಶದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಿಂದ ಪಟ್ಟಣದ ಮೂಲಕ ಮಿನಿವಿಧಾನ ಸೌಧದ ವರೆಗೆ ಸಾಗಿ, ಮಿನಿಸೌದಧ ಮುಂಭಾಗದಲ್ಲಿ ಪುತ್ತೂರು ಭಾರತೀಯ ವೈದ್ಯಕೀಯ ಸಂಘ ಹಾಗೂ ಪುತ್ತೂರು ದಂತ ವೈದ್ಯಕೀಯ ಸಂಘದಿಂದ ಪ್ರತಿಭಟನೆ ನಡೆಯಿತು. 
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರು, ಕೊಲ್ಕತ್ತಾದಲ್ಲಿ ಎನ್.ಆರ್.ಎಸ್. ವೈದ್ಯಕೀಯ ಸಂಸ್ಥೆಯ ಕಿರಿಯ ವೈದ್ಯನಾದ ಡಾ. ಪರಿಭಾ ಮುಖರ್ಜಿ ಅವರ ರೋಗಿಯ ಸಂಬಂಧಿಕರು ಜೂ. 10ರಂದು ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ವೈದ್ಯಕೀಯ ಸಂಘಟನೆಗಳು ಖಂಡಿಸಿರುತ್ತದೆ. ಹಾಗಾಗಿ ಇದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ವೈದ್ಯರಿಗೆ ಇನ್ನಷ್ಟು ರಕ್ಷಣೆ ನೀಡಬೇಕು. ಅಲ್ಲದೇ ಹಲ್ಲೆ ನಡೆಸಿದವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಎಂದು ತಿಳಿಸಿದರು.

ಈ ಸಂದರ್ಭ ಪುತ್ತೂರು ಸಹಾಯಕ ಕಮೀಶನರ್ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ವೈದ್ಯರ ಮೇಲೆ ಪೂರ್ವ ಕ್ರಮ ತಿಳಿಯದೇ ಹಲ್ಲೆ ಮಾಡುವುದು ಸರಿಯಲ್ಲ. ವೈದ್ಯರ ಚಿಕಿತ್ಸೆಯ ಮೂಲಕ ಆಕಸ್ಮಾತ್ ಆಗಿ ರೋಗಿಗಳು ಗಂಭೀರವಾದ ಪರಿಸ್ಥಿತಿಗೆ ಬರಬಹುದು. ಹಾಗೆಂದು ಆ ವೈದ್ಯರಿಗೆ ಹಲ್ಲೆ ಮಾಡುವುದು ಸರಿಯಲ್ಲ. ಅಂತಹ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಡಾ. ಜೆ.ಸಿ. ಅಡಿಗ, ಡಾ. ಸುರೇಶ್ ಪುತ್ತೂರಾಯ, ಡಾ. ಎಸ್.ಎಸ್. ಜೋಶಿ, ಡಾ. ಎಸ್.ಎಸ್. ಪ್ರಸಾದ್, ಡಾ. ಭಾಸ್ಕರ್, ಡಾ. ಗೋವಿಂದರಾಜ್, ಡಾ. ಮಂಜುನಾಥ್, ಡಾ. ಹರಿಕೃಷ್ಣ ಕಾಮತ್, ಡಾ. ನಝೀರ್ ಅಹ್ಮದ್ ಮೊದಲಾದ ವೈದ್ಯರು ಹಾಗೂ ವೈದ್ಯಕೀಯೇತರ ಸಿಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *