Header Ads
Header Ads
Breaking News

ವೈದ್ಯರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ ಸಭೆ, ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ನಡಿಗೆ


ದೇರಳಕಟ್ಟೆ ಆಸ್ಪತ್ರೆಯೊಂದರಲ್ಲಿ ನಡೆದ ವೈದರ ಮೇಲಿನ ಹಲ್ಲೆ ಹಾಗೂ ಅಪಹರಣ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನತನಕ ಬೃಹತ್ ಮೆರವಣಿಗೆ ಜಾಥಾ ನಡೆಯಿತು.
ಪ್ರತಿಭಟನಾ ನಡಿಗೆಯ ಬಳಿಕ ನಡೆದ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ವೈದ್ಯರ ಮೇಲೆ ಹಲ್ಲೆ ನಡೆಸಿರುವ ಕೃತ್ಯ ಅತ್ಯಂತ ಖಂಡನೀಯವಾಗಿದೆ. ಇದನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಬಂಧಿಸಬೇಕು ಹಾಗೂ ಸರಕಾರ ಇನ್ನು ಮುಂದೆ ಈ ರೀತಿಯ ಘಟನೆ ನಡೆಯದಂತೆ ಕಾನೂನು ಮಾಡಬೇಕೆಂದು ನಿಟ್ಟೆ ವೈದ್ಯಕೀಯ ಸಂಸ್ಥೆಯ ಉಪಕುಲಪತಿ ಡಾ. ಶಾಂತರಾಮ್ ಶೆಟ್ಟಿ ಆಗ್ರಹಿಸಿದರು. ಈ ಪ್ರತಿಭಟನಾ ರ್‍ಯಾಲಿಯಲ್ಲಿಸಾವಿರಾರು ವೈದ್ಯರು, ನರ್ಸ್‌ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಕರಾವಳಿಯ ಬಹುತೇಕ ಕ್ಲಿನಿಕ್‌ಗಳ ಬಂದ್ ಕೂಡ ಈ ವೇಳೆ ನಡೆದಿದೆ.

Related posts

Leave a Reply