Header Ads
Header Ads
Header Ads
Breaking News

ವೈಭವಪೂರಿತವಾಗಿ ನಡೆದ ಪಡುಬಿದ್ರಿ ಬಾಲಗಣಪತಿ ಶೋಭಾಯಾತ್ರೆ

ಪಡುಬಿದ್ರಿಯ ಇತಿಹಾಸ ಪ್ರಸಿದ್ಧ ಗುಡ್ಡೆ ಬಾಲಗಣಪತಿ ದೇವರ ಶೋಭಯಾತ್ರೆಯು ಸಹಸ್ರಾರು ಭಕ್ತಾಧಿಗಳ ಪಾಲ್ಗೋಳ್ಳುವಿಕೆಯೊಂದಿಗೆ, ಚೆಂಡೆ ನರ್ತನ ಸಹಿತ ವಿವಿಧ ವೇಷಭೂಷಣಗಳೊಂದಿಗೆ ಬಹಳ ವಿಜ್ರಂಭಣೆಯಿಂದ ಜರಗಿದೆ.


ಕಳೆದ ಚೌತಿಯ ದಿನಂದಂದ್ದು ಪ್ರತಿಷ್ಠೆಗೊಂಡು ನಿರಂತವಾಗಿ ಭಕ್ತರಿಂದ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸಿದ ಬಾಲಗಣಪತಿ, ತಾಯಿ ಶಾರದೆಯ ಶೋಭಾಯಾತ್ರೆಯ ಚೆಲುವನ್ನು ನೋಡಿದ ಬಳಿಕ ಪಡುಬಿದ್ರಿಯ ಕಡಲ ನೀರಲ್ಲಿ ಐಕ್ಯವಾಗಿದ್ದಾನೆ.
ಗುಡ್ಡ ಪ್ರದೇಶದಲ್ಲಿ ದನಗಳನ್ನು ಮೇಯಿಸುತ್ತಿದ್ದ ಬಾಲಕರು, ಆಟವಾಡುತ್ತಾ ಕಲ್ಲೊಂದನ್ನು ಗಣಪತಿ ದೇವರ ಹೇಸರೇಳಿ ಪೂಜಿಸುತ್ತಿದ್ದು, ಮಕ್ಕಳ ಭಕ್ತಿಗೆ ಮೆಚ್ಚಿದ ಗಣಪತಿ ತನ್ನ ಇರುವಿಕೆನ್ನು ಗ್ರಾಮದ ಪ್ರಮುಖರ ಗಮನಕ್ಕೆ ತಂದಿದ್ದು, ಈ ಬಗ್ಗೆ ಪ್ರಶ್ನೆಯಲ್ಲಿ ಕಂಡುಬಂದಂತೆ ಮಕ್ಕಳಿಂದ ಪ್ರತಿಷ್ಠೆಗೊಂಡು ಗಣಪತಿ ಬಾಲಗಣಪತಿಯಾಗಿ ಇಂದಿಗೂ ಭಕ್ತರ ಇಷ್ಠಾರ್ಥವನ್ನು ಈಡೇರಿಸುತ್ತಿದ್ದು, ಇಲ್ಲಿನ ಪ್ರಮುಖ ಹರಕೆ ರಂಗಪೂಜೆಯನ್ನು ಊರ-ಪರವೂರ ಭಕ್ತಾಧಿಗಳು ನೀಡುತ್ತಿದ್ದು, ಒಂದು ತಿಂಗಳ ಪರಿರ್ಯಂತ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಹರಿದು ಬರುತ್ತಾರೆ.
ವರದಿ-ಸುರೇಶ್ ಎರ್ಮಾಳ್

Related posts

Leave a Reply