Header Ads
Breaking News

ವೈರಲ್ ಆಗಿ ಹರಿದಾಡುತ್ತಿರುವ ಆಡಿಯೋ ಬಗ್ಗೆ ತನಿಖೆಯಾಗಬೇಕು: ಪುಣಚ ಹಿಂದೂ ಹಿತರಕ್ಷಣಾ ವೇದಿಕೆಯ ಆಗ್ರಹ

ವಿಟ್ಲ: ಶಾಂತಿ ಸಾಮರಸ್ಯಕ್ಕೆ ಹೆಸರಾಗಿದ್ದ ಪುಣಚ ಗ್ರಾಮದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವಂತ ಘಟನೆಗಳು ನಡೆಸುತ್ತಿರುವುದು ಖಂಡನೀಯ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಧ್ವನಿ ಮುದ್ರಣದ ಸತ್ಯಾಸತ್ಯತೆಯನ್ನು ಪರಿಶೀಲಸಬೇಕು. ದುಷ್ಕೃತ್ಯ ನಡೆಸಿದ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಪುಣಚ ಘಟಕ ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪುತ್ತೂರು ಮಂಡಲ ಕಾರ್ಯದರ್ಶಿ ರಾಮಕೃಷ್ಣ ಬಿ. ಮೂಡಂಬೈಲು ಅವರು ಪುಣಚ ಮಣಿಲದಲ್ಲಿ ಚರ್ಚ್ ಬಳಿಯಲ್ಲಿದ್ದ ಪ್ರತಿಮೆಗೆ ಕಲ್ಲು ತೂರಿ ಸಮಾಜದಲ್ಲಿ ಶಾಂತಿ ಕೆಡಿಸಲು ಮುಂದಾಗಿರುವ ವಿಚಾರ ಊರಿಗೆ ತಿಳಿದಿದೆ. ಸಮರ್ಪಕವಾಗಿ ಸಾಕ್ಷಾಧಾರಗಳನ್ನು ಸಂಗ್ರಹಿಸದೆ ಒತ್ತಡಕ್ಕೆ ಮಣಿದು ಹಿಂದೂ ಯುವಕರನ್ನು ಠಾಣೆಗೆ ಕರೆಸಿ ತನಿಖೆಗೆ ಒಳಪಡಿಸಲಾಗಿತ್ತು. ಆದರೆ ನೈಜ ಆರೋಪಿಗಳೆಂದು ತಿಳಿದರೂ ಅವರನ್ನು ವಿಚಾರಣೆಯೂ ನಡೆಸದೆ ಬಿಟ್ಟುರುವುದು ಸರಿಯಲ್ಲ ಎಂದು ಹೇಳಿದರು.

ಪುತ್ತೂರು ಮಂಡಲ ರೈತ ಮೋರ್ಚಾ ಉಪಾಧ್ಯಕ್ಷ ರಾಜೇಂದ್ರ ರೈ ಬೈಲುಗುತ್ತು, ಬಿಜೆಪಿ ಪುಣಚ ಗ್ರಾಮ ಸಮಿತಿ ಅಧ್ತಕ್ಷ ಹರೀಶ್ ಎಂ., ಕಾರ್ಯದರ್ಶಿ ಪ್ರವೀಣ್, ಸಾಮಾಜಿಕ ಕಾರ್ಯಕರ್ತ ಗುರುವಪ್ಪ ಡಿ. ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *