Header Ads
Header Ads
Header Ads
Breaking News

ವೈರೋಕಾನ್-2017 ಅಂತರರಾಷ್ಟ್ರೀಯ ಸಮ್ಮೇಳನ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಡಿಟೋರಿಯಂನಲ್ಲಿ ಕಾರ್ಯಕ್ರಮ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ, ನಿಟ್ಟೆ ವಿವಿ ಸಹಯೋಗ

ದೇರಳಕಟ್ಟೆಯ ನಿಟ್ಟೆ ವಿವಿಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ವೈರೋಕಾನ್-2017 ಅಂತರಾಷ್ಟ್ರೀಯ ಸಮ್ಮೇಳನ ನಡೆಯಿತು.

ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಜಪಾನ್, ಕೊರಿಯಾ, ಆಮೇರಿಕಾದಂತಹ ದೇಶಗಳು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದು ಭಾರತ ಮಾತ್ರ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧಿಸಲು ಇನ್ನೂ ಬಹಳಷ್ಟಿದ್ದು ಪ್ರಸ್ತುತ ದಿನಗಳು ಸಂಶೋಧನೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಅಧ್ಯಕ್ಷ ಪ್ರೊ. ಅನುಪಮ್ ವರ್ಮ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆಗಳು ನಡೆದಿರುವುದರಿಂದ ಸದ್ಯ ರೋಗ ಪತ್ತೆಹಚ್ಚುವಿಕೆ ವಿಧಾನ ಸರಳವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬ್ಯಾಕ್ಟರೀಯಾ, ವೈರಸ್‌ಗಳು ಸೃಷ್ಟಿಯಾಗದಂತೆ ರೋಗಾಣು ತಜ್ಞರು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದರು.

ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ನಿಟ್ಟೆ ವಿವಿಯ ಕುರಿತಾಗಿ ಪರಿಚಯಿಸಿ, ಎ ಸೆಂಚುರಿ ಆಫ್ ಪ್ಲಾಂಟ್ ವೈರಾಲಾಜಿ ಇನ್ ಇಂಡಿಯಾ ಎಂಬ ಕೃತಿ ಬಿಡುಗಡೆಗೊಳಿಸಿದರು.

ಇಂಟರ್ ನ್ಯಾಷನಲ್ ಕಮಿಷನ್ ಆಫ್ ವೈರಲ್ ಟ್ಯಾಕ್ಸಾನಮಿ ಯುನೈಟೆಡ್ ಕಿಂಗ್‌ಡಮ್ ಚೇರ್‌ಮೆನ್ ಪ್ರೊ. ಡಾ. ಆಂಡ್ ರೋ ಡೇವಿಸನ್, ವೈರೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರೊ. ಡಾ. ಜಿ.ಪಿ.ರಾವ್, ಸಮ್ಮೇಳನ ಸಂಘಟಕ ಪ್ರೊ. ಡಾ. ಇಡ್ಯಾ ಕರುಣಾಸಾಗರ್ ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ. ಡಾ. ಇಂದ್ರಾಣಿ ಕರುಣಾಸಾಗರ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply